ಮುಂಡಗೋಡ: ಪಟ್ಟಣದ ಮಾರಿಕಾಂಬಾ ದೇವಿಯ ಜಾತ್ರೆಯ ಎಂಟನೇ ದಿನವಾದ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವಿಯ ಆಶೀರ್ವಾದ ಪಡೆದರು.

ಹಣ್ಣು ಕಾಯಿ ಸೇವೆ ಸಲ್ಲಿಸುವ ಭಕ್ತರು ಸರದಿಯಲ್ಲಿ ನಿಂತು, ದೇವಿಗೆ ಸಮರ್ಪಿಸಿದರು. ಕಳೆದ ಎಂಟು ದಿನಗಳಿಂದ ಅದ್ದೂರಿಯಾಗಿ ನಡೆದಿರುವ ಏಳನೇ ಮಾರಿಕಾಂಬಾ ದೇವಿ ಜಾತ್ರೆಗೆ ಬುಧವಾರ ಕೊನೆಯ ದಿನವಾಗಿದ್ದು, ಮಧ್ಯಾಹ್ನ 2ಗಂಟೆಯ ವರೆಗೆ ಮಾತ್ರ ಹಣ್ಣು ಕಾಯಿ ಸೇವೆ ನಡೆಯಲಿದೆ.

ದೇವಿಯ ಗದ್ದುಗೆಯನ್ನು ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಹೂವುಗಳ ಅಲಂಕಾರ, ಬಣ್ಣದ ಬೆಳಕಿನಲ್ಲಿ ಮಿಂಚುವ ಜಾತ್ರಾ ಮಂಟಪ, ಎದುರಿನ ಅಕ್ಷಯ ಮಂಟಪವು ಭಕ್ತರನ್ನು ಆಕರ್ಷಿಸುತ್ತಿವೆ. ಬುಧವಾರ ಸಂಜೆ 4ಗಂಟೆಯ ನಂತರ ದೇವಿಯ ವಿಸರ್ಜನಾ ಮೆರವಣಿಗೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.