ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಜಂಪ್‌ನಲ್ಲಿ ಕುಮಟಾ ಕುವರಿಯ ಭರವಸೆ

ಮಂಡ್ಯದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಿತ್ರಗಿಯ ಬಾಲಕಿ ಆಯ್ಕೆ
Last Updated 5 ನವೆಂಬರ್ 2019, 15:14 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿಹೈಜಂಪ್ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದಿರುವ ಮಹಾಲಕ್ಷ್ಮಿಗೌಡ, ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ಕುಮಟಾ ತಾಲ್ಲೂಕಿನ ಚಿತ್ರಗಿ ಗ್ರಾಮದ ಕಲ್ಸಂಕದ ನಿವಾಸಿ ದಾಮೋದರ ಹಾಗೂ ಗಿರಿಜಾ ದಂಪತಿಯ ಪುತ್ರಿ. ಇಲ್ಲಿನ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಲಿಕೆ ಜೊತೆ ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾಳೆ.

ಈಚೆಗೆ ಅಂಕೋಲಾದ ಶೆಟಗೇರಿಯಲ್ಲಿ ನಡೆದಹೈಜಂಪ್ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಳು. ಎರಡನೇ ಬಾರಿಗೆ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನುಪ್ರತಿನಿಧಿಸುವಅವಕಾಶ ಪಡೆದುಕೊಂಡಿದ್ದಾಳೆ.ನ.10ರಂದು ಮಂಡ್ಯದಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಪ್ರಾಥಮಿಕ ಶಾಲೆಯಲ್ಲಿರುವಾಗ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಹೈಜಂಪ್‌ನಲ್ಲಿ ಗಮನಾರ್ಹ ಸಾಧನೆ ತೋರಿ ಮೆಚ್ಚುಗೆ ಗಳಿಸಿದ್ದಳು. ಈ ಬಾರಿಯೂ ಉತ್ತಮ ಸಾಧನೆಯಿಂದ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದಾಳೆ.

‘2018ರರಾಜ್ಯಮಟ್ಟದಕ್ರೀಡಾಕೂಟದಲ್ಲಿ 1.34 ಮೀಟರ್ ಎತ್ತರಕ್ಕೆ ಜಿಗಿದದ್ದು ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ನಿರಂತರ ಶ್ರಮದಿಂದ ಈಗ 1.50 ಮೀಟರ್ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿದ್ದಾಳೆ’ ಎನ್ನುತ್ತಾರೆಈಕೆಯ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಆಚಾರ್ಯ.

‘ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಗಳಿಸುವುದರ ಜೊತೆಗೆ, ಕ್ರೀಡೆಯಲ್ಲೂತಾನು ಸಾಧಿಸಬೇಕು ಎಂದು ತೊಡಗಿಸಿಕೊಳ್ಳುವಛಲ ಪ್ರಶಂಸಾರ್ಹ. ಆಸಕ್ತಿ, ಶ್ರದ್ಧೆ ಇರುವ ಮಕ್ಕಳಿದ್ದಾಗ ತರಬೇತಿ ನೀಡಲು ಉತ್ಸಾಹ ಹೆಚ್ಚುತ್ತದೆ’ ಎಂದು ಅವರು ಹೇಳುತ್ತಾರೆ.

‘ನನಗೆಬಾಲ್ಯದಿಂದಲೂ ಕ್ರೀಡಾ ಚಟುವಟಿಕೆಗಳತ್ತಸೆಳೆತವಿತ್ತು. ಹೈಜಂಪ್ ನನ್ನ ಮೊದಲ ಆಯ್ಕೆಯಾಗಿತ್ತು. ದೈಹಿಕವಾಗಿ ಸಾಕಷ್ಟು ಶ್ರಮಿಸಬೇಕಿತ್ತಾದರೂ ಅದರಲ್ಲಿ ನೈಪುಣ್ಯ ಪಡೆದುಕೊಳ್ಳುವತ್ತ ಆಸಕ್ತಿವಹಿಸಿದೆ. ಪ್ರಾಥಮಿಕ ಶಾಲೆಯಲ್ಲಿ ಸುಜಾತಾ ಮೇಡಂ ಅವರು ನನಗೆ ತರಬೇತಿ, ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು. ಶಿಕ್ಷಕ ವರ್ಗ, ಕುಟುಂಬದವರೆಲ್ಲರೂ ಸಹಕಾರ ನೀಡಿ ಪ್ರೇರಣೆಯಾಗಿದ್ದಾರೆ. ಈ ಬಾರಿ ರಾಜ್ಯಮಟ್ಟದಲ್ಲಿ ಗೆಲ್ಲಬೇಕೆಂಬ ಆಸೆಯಿದೆ’ ಎನ್ನುತ್ತಾಳೆ ಮಹಾಲಕ್ಷ್ಮಿಗೌಡ.

ತರಕಾರಿ ವ್ಯಾಪಾರಿಯ ಮಗಳು:ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಹಾಲಕ್ಷ್ಮಿಯ ತಂದೆ ದಾಮೋದರ ಗೌಡ ತರಕಾರಿ ವ್ಯಾಪಾರಿ.ಕುಮಟಾ ಪಟ್ಟಣದ ಮೂರುಕಟ್ಟೆ ವೃತ್ತದ ಬಳಿ ತರಕಾರಿ ಮಾರುತ್ತಾರೆ.ಅದರಿಂದಲೇಇವರ ಜೀವನೋಪಾಯ ಸಾಗಿಸುತ್ತಿದ್ದಾರೆ.ತಾಯಿ ಗಿರಿಜಾ ಗೃಹಿಣಿಯಾಗಿದ್ದುಕೊಂಡು, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT