ಭೀಮಕೋಲ ಡ್ಯಾಮ್ ಹಿನ್ನೀರಿನಲ್ಲಿ ಆದಷ್ಟು ಶೀಘ್ರವೇ ಜಲಸಾಹಸ ಚಟುವಟಿಕೆ ಆರಂಭಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗೆ ಚಾಲನೆ ನೀಡಲಾಗುತ್ತದೆ
ಈಶ್ವರ ಕಾಂದೂ ಸಿಇಒ ಜಿಲ್ಲಾ ಪಂಚಾಯಿತಿ
ಬಾಚಣಕಿ ನಿಪ್ಲಿಯಲ್ಲೂ ಬೋಟಿಂಗ್
‘ಭೀಮಕೋಲ ಡ್ಯಾಮ್‍ನಲ್ಲಿ ಜಲಸಾಹಸ ಚಟುವಟಿಕೆ ಆರಂಭಿಸಿದ ಬಳಿಕ ಮುಂಡಗೋಡ ತಾಲ್ಲೂಕಿನ ಬಾಚಣಕಿ ಜಲಾಶಯ ಸಿದ್ದಾಪುರ ತಾಲ್ಲೂಕಿನ ಹೊಸೂರು ಸಮೀಪದ ನಿಪ್ಲಿ ಜಲಪಾತದಲ್ಲಿಯೂ ಜಲಸಾಹಸ ಚಟುವಟಿಕೆಗಳಾದ ಬೋಟಿಂಗ್ ಕಯಾಕಿಂಗ್ ಚಟುವಟಿಕೆ ಆರಂಭಿಸಲು ಯೋಜಿಸಲಾಗಿದೆ. ಇಲ್ಲಿ ತಜ್ಞರು ಪರಿಶೀಲಿಸಿದ ಬಳಿಕ ಅಗತ್ಯ ಸುರಕ್ಷತಾ ಕ್ರಮ ಆಧರಿಸಿ ಚಟುವಟಿಕೆ ಆರಂಭಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ತಿಳಿಸಿದರು.