ಯಲ್ಲಾಪುರ: ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ಬೇಡ್ತಿ ತಟದ ಸುತ್ತಮುತ್ತಲ ಗ್ರಾಮಸ್ಥರು ಭಾನುವಾರ ಬೇಡ್ತಿ ಸೇತುವೆಯ ತಟದಲ್ಲಿರುವ ಹೊಳೆ ಹುಲಿಯಪ್ಪನ ಬಳಿ ನದಿಪೂಜೆ ನೆರವೇರಿಸಿದರು.

ಚಂದಗುಳಿ, ಮಳಲಗಾಂವ್, ಹುತ್ಕಂಡ, ಜೂಜನಬೈಲ್, ಮಂಚಿಕೇರಿ, ಹಾಸಣಗಿ, ತೂಕದಬೈಲ್, ಉದ್ದಾಬೈಲ್, ಕವಡಿಕೆರೆ, ಬಾಳೆಗದ್ದೆ, ಮಾಗೋಡ, ತಾರಿಮಕ್ಕಿ ಭಾಗದ ನಾಗರಿಕರು ನದಿಗೆ ಪೂಜೆ ನೆರವೇರಿಸಿ, ಬೇಡ್ತಿ-ನದಿ ತಿರುವು ಯೋಜನೆ ಜಾರಿ ಆಗಬಾರದು. ನಮ್ಮ ನದಿ, ನಮ್ಮ ನೀರು, ನಮ್ಮ ಭೂಮಿ ನಮ್ಮದಾಗಿಯೇ ಉಳಿಯಬೇಕು ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಸಂಕಲ್ಪ ಪೂಜೆ ನೆರವೇರಿಸಿ ನದಿ ಪೂಜೆ ನೆರವೇರಿಸಿದರು. ಸಾರ್ವಜನಿಕರು ಬೇಡ್ತಿ ನದಿ ತಿರುವು ಆಗಲು ಬಿಡೆವು, ಬೇಡ್ತಿ ಉಳಿಸಿ, ನಮ್ಮ ನೆಲ ಪರಿಸರ ಉಳಿಸಿ ಮುಂತಾಗಿ ಘೋಷಣೆ ಕೂಗಿದರು. ಜಾಗಟೆ, ಶಂಕನಾದ, ಮಂತ್ರಘೋಷದ ಮೂಲಕ ನದಿಗೆ ಗಂಗಾರತಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.