ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಇತ್ತೀಚೆಗೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ‘ಕರಾವಳಿ ಸಂಗಮೋತ್ಸವ’ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೋವಾ ನೃತ್ಯ ತಂಡ ಮೊದಲ ಬಹುಮಾನವಾಗಿ ₨1.50 ಲಕ್ಷ ಮೊತ್ತ ಪಡೆಯಿತು.

2ನೇ ಬಹುಮಾನ ₨ 1ಲಕ್ಷವನ್ನು ಮಂಗಳೂರು ತಂಡ ಹಾಗೂ 3ನೇ ಬಹುಮಾನ ₨50 ಸಾವಿರ ಮೊತ್ತವನ್ನು ಮಂಗಳೂರಿನ ಮತ್ತೊಂದು ತಂಡ ಪಡೆದುಕೊಂಡಿತು. ಭಟ್ಕಳ ಹಾಗೂ ಮುರ್ಡೇಶ್ವರ ನೃತ್ಯ ತಂಡಗಳು ಸಮಾಧಾನಕರ ಬಹುಮಾನವಾಗಿ ತಲಾ ₨25 ಸಾವಿರ ಪಡೆದುಕೊಂಡವು.

ಸ್ಪರ್ಧೆಯಲ್ಲಿ ರಾಜಸ್ತಾನ್, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಿಂದ ಒಂದೊಂದು ನೃತ್ಯ ತಂಡ ಹಾಗೂ ಕರ್ನಾಟಕದಿಂದ 5 ತಂಡಗಳು ಭಾಗವಹಿಸಿದ್ದವು.

ತೀರ್ಪುಗಾರರಾಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಕಮಲೇಶ್ ಮತ್ತು ಸೆಸಿಲ್, ನೃತ್ಯ ಸಂಯೋಜಕಿ ಜೆನ್ಯಾ ಮರೇನಿಚ್ ಭಾಗವಹಿಸಿದ್ದರು.

ಉದ್ಘಾಟನೆ: ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ನಿವೇದಿತ ಆಳ್ವ ಉದ್ಘಾಟಿಸಿದರು. ನಟ ವಿಜಯ ರಾಘವೇಂದ್ರ ಭಾಗವಹಿಸಿದ್ದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.