₹ 40.29 ಲಕ್ಷ ವಶಕ್ಕೆ: ಜಿಲ್ಲೆಯಲ್ಲಿ ಪರವಾನಗಿ ಹೊಂದಿದ 8,351 ಬಂದೂಕುಗಳಲ್ಲಿ 8,289 ಅನ್ನು ಈವರೆಗೆ ಜಮಾ ಮಾಡಿಕೊಳ್ಳಲಾಗಿದೆ. 14 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹ 40.29 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆ ಅಡಿಯಲ್ಲಿ 20 ಪ್ರಕರಣಗಳನ್ನು ದಾಖಲಿಸಿ 467.60 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ. ಹತ್ತು ಡಿ.ಎಸ್.ಪಿ, 20 ಪೊಲೀಸ್ ಇನ್ಸ್ಪೆಪೆಕ್ಟರ್ಗಳು, 29 ಪಿ.ಎಸ್.ಐ, 600 ಗೃಹ ರಕ್ಷಕರು, 70 ಅರಣ್ಯ ರಕ್ಷಕರು, 3 ಕೆ.ಎಸ್.ಆರ್.ಪಿ, 12 ಡಿ.ಎ.ಆರ್: 12 ತುಕಡಿಗಳು, 18 ಕೇಂದ್ರ ಸಶಸ್ತ್ರ ಪಡೆ ಮತ್ತು 1500 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.