ಯಲ್ಲಾಪುರ: ಶಾಲ್ಮಲಾ ನದಿ ತೀರದಲ್ಲಿ ಸ್ಥಾಪನೆ ಆಗುತ್ತದೆ ಎಂದು ಹೇಳಲಾದ ಜಲವಿದ್ಯುತ್ ಯೋಜನೆ ವಿರೋಧಿಸಿ ಇದೇ 13ರಂದು ಗಣೇಶ ಫಾಲ್್ಸ ನಲ್ಲಿ ಸಂಘಟಿಸಲಾದ ಸಮಾವೇಶ ರಾಜಕೀಯ ಪ್ರೇರಿತವಾಗಿದೆ. ಅತ್ಯಂತ ಶ್ರೀಮಂತ ಪರಿಸರವನ್ನು ಹೊಂದಿದ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರಕ್ಕೆ ಅಥವಾ ಇಲ್ಲಿಯ ಜನಜೀವನಕ್ಕೆ ಮಾರಕವೆನಿಸುವ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯೋಜಿತ ಜಲವಿದ್ಯುತ್ ಯೋಜನೆ ರಾಜ್ಯದ ಬಿಜೆಪಿ ಸಕರ್ಾರದ ಕಾಲದಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ ತಮ್ಮ ಸರ್ಕಾರದ ಅವಧಿಯಲ್ಲೇ ಜಾರಿಮಾಡಿದ ಯೋಜನೆಯನ್ನು ಈಗ ವಿರೋಧ ಪಕ್ಷದಲ್ಲಿದ್ದು, ವಿರೋಧಿಸುತ್ತಿರುವವರು ಬಿಜೆಪಿಯವರೇ ಆಗಿದ್ದಾರೆಂಬುದು ವಿಪರ್ಯಾಸ ಎಂದು ಅವರು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರದೇ ಏಕಾಏಕಿ ಚುನಾವಣೆ ಘೋಷಣೆಯ ಸಂದರ್ಭದಲ್ಲಿ ಪರಿಸರದ ಹೆಸರಿನಲ್ಲಿ ಸಂಘಟಿಸುವ ಈ ಹೋರಾಟ ಮುಗ್ಧ ಜನರನ್ನು ಹಾಗೂ ರೈತರಿಗೆ ಭಯವೊಡ್ಡಿ ದಿಕ್ಕುತಪ್ಪಿಸುವ ತಂತ್ರವಾಗಿದೆ. ಅದನ್ನು ವಿರೋಧಿಸುವ ನಿಟ್ಟಿನಲ್ಲಿ ನೈಜ ಕಾಳಜಿ ಸಮಾವೇಶ ಸಂಘಟಕರಿಗೆ ಇದ್ದಿದ್ದರೆ ಸೌಜನ್ಯಕ್ಕಾದರೂ ಯಲ್ಲಾಪುರದ ಶಾಸಕನಾದ ನನಗೆ ಕನಿಷ್ಠ ಮಾಹಿತಿಯನ್ನಾದರೂ ಕೊಡ ಬೇಕಿತ್ತು ಎಂದರು.

ಶ್ರೀಗಳ ಗೌರವಕ್ಕೆ ಧಕ್ಕೆ ತರುವ ಯತ್ನ ಸಲ್ಲದು: ಶುಕ್ರವಾರ ನಡೆಯಲಿರುವ ಸಮಾವೇಶದಲ್ಲಿ ಸ್ವರ್ಣವಲ್ಲಿಯ ಪರಮ ಪೂಜ್ಯ ಸ್ವಾಮೀಜಿ ಯವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳು ತ್ತಿದ್ದು, ಶ್ರೀಗಳಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಗಳ ಆದೇಶ, -ನಿರ್ದೇಶನ ಏನಿದೆಯೋ ಅದಕ್ಕೆ ತಲೆ ಬಾಗಿ ಕೆಲಸ ಮಾಡುವುದಕ್ಕೆ ಸಿದ್ಧನಿದ್ದೇನೆ. ಪರಿಸರವಾದಿಗಳು ಶ್ರೀಗಳನ್ನು ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇಂತಹ ದ್ವಿಮುಖ ನೀತಿಗಳನ್ನು ಪ್ರದರ್ಶಿಸುವ ಜನರ ಬಗ್ಗೆ ಶ್ರೀಗಳು ಗಮನಹರಿಸಬೇಕೆಂದು ವಿನಂತಿಸಿದರು.

ಕಾಂಗ್ರೆಸ್ ನ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಮಾತನಾಡಿ, ಪರಿಸರಕ್ಕೆ ಅಪಾಯ ತರುವ ಯೋಜನೆ ಜಾರಿಯಾಗುವುದೇ ಸತ್ಯ ವಾಗಿದ್ದರೆ, ಚುನಾವಣೆಯ ನಂತರ ಹೋರಾಟ ಮಾಡಬಹುದಿತ್ತು ಅಥವಾ ಜನಪ್ರತಿನಿಧಿಗಳ ಗಮನಕ್ಕೆ ಈ ವಿಷಯ ತರಬಹುದಿತ್ತು. ಆದರೆ ರಾಜಕೀಯ ಪ್ರೇರಿತವಾದ ಇಂಥ ಹೋರಾಟ ಗಳನ್ನು ನಡೆಸುವುದು ಸರಿಯಲ್ಲ ಎಂದರು.

ಟಿಎಂಎಸ್ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಕಾಂಗ್ರೆಸ್ ಪ್ರಮುಖರಾದ ಆರ್.ಆರ್. ಹೆಗಡೆ ಶೀಗೆಮನೆ, ಉಲ್ಲಾಸ ಶಾನಭಾಗ, ಡಿ.ಎನ್.ಗಾಂವ್ಕಾರ್, ಡಿ.ಟಿ.ಹೆಗಡೆ ಹಿತ್ಲಳ್ಳಿ, ಸುಬ್ಬಯ್ಯ ಧೋಗಳೆ, ವಿಜಯ ಮಿರಾಶಿ, ಗಣಪತಿ ಬಾಳೆಗದ್ದೆ, ನರಸಿಂಹ ನಾಯ್ಕ, ರವೀಂದ್ರ ಹೆಗಡೆ ಹಿರೇಸರ, ಎಂ.ಜಿ.ಭಟ್ಟ ಸಂಕದಗುಂಡಿ, ಪ್ರೇಮಾನಂದ ನಾಯ್ಕ, ಎನ್.ಕೆ. ಭಟ್ಟ ಮೆಣಸುಪಾಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.