ಹಲಸೂರಿನಲ್ಲಿ ನಾಳೆ ವಚನ ಸಾಹಿತ್ಯ ಸಮ್ಮೇಳನ

7

ಹಲಸೂರಿನಲ್ಲಿ ನಾಳೆ ವಚನ ಸಾಹಿತ್ಯ ಸಮ್ಮೇಳನ

Published:
Updated:

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಹಲಸೂರು ಗ್ರಾಮದಲ್ಲಿರುವ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಆವರಣದಲ್ಲಿ ಆಗಸ್ಟ್ 9 ರ ಬೆಳಿಗ್ಗೆ 11 ರಿಂದ 3 ಗಂಟೆವರೆಗೆ ವಚನ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಹಿರಿಯರಂಗ ಕಲಾವಿದ, ವಚನ ಗಾಯಕ ಸಾತನೂರಿನ ಎಸ್.ವಿ. ಮಹದೇವಸ್ವಾಮಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಿಯಾದರ್ಶಿನಿ ಸೇವಾ ಕೇಂದ್ರ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಬಿ.ಶಿವಲಿಂಗಯ್ಯ ಉದ್ಘಾಟನೆಯನ್ನು
ನೆರವೇರಿಸಲಿದ್ದಾರೆ.

ಶಾಲೆಯ ಪ್ರಾಂಶುಪಾಲೆ ಶಾಂತಾ.ಸಿ ಅಧ್ಯಕ್ಷತೆವಹಿಸಲಿದ್ದಾರೆ, ತಹಶೀಲ್ದಾರ್ ಆರ್.ಯೋಗಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 11 ಗಂಟೆಗೆ ವಚನ ಚಿಂತನಗೋಷ್ಠಿ ನಡೆಯಲಿದೆ. ಬೆಂಗಳೂರಿನ ಮಹಾಕವಿ ಡಾ.ಸತ್ಯವಿಠಲ ಅಧ್ಯಕ್ಷತೆ ವಹಿಸಲಿದ್ದಾರೆ.

ನಾಗರಸನಕೋಟೆ ವಿಶ್ವಾರಾಧ್ಯ ಅಲ್ಲಮಪ್ರಭು, ಡಾ. ಆರ್.ವಾದಿರಾಜು ಆಯ್ದಕ್ಕಿಮಾರಯ್ಯ, ಡಾ.ಎನ್.ಎಚ್.ಭುವನೇಶ್ವರ್ ಅಮುಗೆರಾಯಮ್ಮ, ಪ್ರೊ. ವೃಷಭೇಂದ್ರಮೂರ್ತಿ ಶಿವಶರಣೆ ಲಿಂಗಮ್ಮ ಕುರಿತು ಪಾಲ್ಗೊಳ್ಳಲಿದ್ದಾರೆ.

ಗಾಯಕರಾದ ಬರಗೂರು ಪುಟ್ಟರಾಜು, ಎಚ್.ಎನ್.ವಿಜಯ, ಹೊಳಸಾಲಯ್ಯ ವಚನ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ನಂತರ ಸ್ವರಚಿತ ವಚನಗೋಷ್ಠಿ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

ಬಸವ ಸಮಿತಿಯ ಎಸ್.ವಿ. ಬಾವಿಕಟ್ಟೆ ಅಧ್ಯಕ್ಷತೆವಹಿಸಲಿದ್ದಾರೆ. ಹಾ.ವಿ. ಮಂಜುಳಶಿವಾನಂದ್, ಪುಟ್ಟಸ್ವಾಮಿ ಬೂಹಳ್ಳಿ, ಕೂ.ಗಿ.ಗಿರಿಯಪ್ಪ, ಡಾ. ಎಂ. ಭೈರೇಗೌಡ ಇವರು ಸ್ವರಚಿತ ವಚನವಾಚಿಸುವರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಟಿ.ಎಸ್.ಶಿವರಾಮ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಸಮಾಜಸೇವಕ ಹೊನ್ನಿಗನಹಳ್ಳಿ ಶ್ರೀಕಂಠು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾತನೂರು ಮಾಯಣ್ಣ ಉಪಸ್ಥಿತರಿರುವರು ಎಂದು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ
ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !