ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: 21 ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

Published 15 ಜೂನ್ 2023, 15:20 IST
Last Updated 15 ಜೂನ್ 2023, 15:20 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ 21 ಗ್ರಾಮ ಪಂಚಾಯ್ತಿಗಳ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಸಭೆ ಗುರುವಾರ ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, 'ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಪಾರದರ್ಶಕವಾಗಿ ನಿಗದಿಪಡಿಸಲಾಗುತ್ತಿದೆ. ಇದರಿಂದಾಗಿ ಯಾವುದೇ ಗೊಂದಲಗಳಾಗುವುದಿಲ್ಲ' ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ತಹಶೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ, ತಾಲ್ಲೂಕು ಪಂಚಾಯ್ತಿ ಇಒ ಡಾ.ಜಿ.ಪರಮೇಶ್ವರ, ವ್ಯವಸ್ಥಾಪಕ ಎಂ.ಮಹಾಂತೇಶ, ದೇವೇಂದ್ರಪ್ಪ, ಚನ್ನಬಸಪ್ಪ ಇದ್ದರು.

ಪೈಪೋಟಿ ಇಲ್ಲದೆ ಅಧ್ಯಕ್ಷೆ

ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷರ ಮೀಸಲಾತಿ ಪರಿಶಿಷ್ಟ ಪಂಗಡ(ಎಸ್ಟಿ) ಮಹಿಳೆಗೆ ಮೀಸಲಾಗಿದೆ. ಪಂಚಾಯ್ತಿ ವ್ಯಾಪ್ತಿಯ ಉತ್ತರ ಭಾಗದ ಏಣಿಗಿ ಪೂರ್ಣಿಮಾ ಹನುಮೇಶ್ ಅವರು ಒಬ್ಬರೇ ಎಸ್ಟಿ ಮಹಿಳೆ ಇರುವುದರಿಂದ ಅವಿರೋಧವಾಗಿ ಜಯಗಳಿಸುತ್ತಾರೆ. ಗ್ರಾಮ ಪಂಚಾಯ್ತಿಯಲ್ಲಿ 1994ರ ಬಳಿಕ ಅಧ್ಯಕ್ಷ ಸ್ಥಾನ ಎಸ್ಟಿ ಸಮುದಾಯಕ್ಕೆ ಮೀಸಲಾಗಿದೆ.

ಕಳೆದ ಬಾರಿಯ ಅವಧಿಯಲ್ಲೂ ಎಸ್ಸಿ ಮೀಸಲಾತಿ ನಿಗದಿಯಾಗಿದ್ದರಿಂದ ಏಕೈಕ ಸದಸ್ಯೆ ಪ್ರತಿಭಾ ಗಿರೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮೀಸಲಾತಿ ವಿವರ ಗ್ರಾಮ

ಪಂಚಾಯ್ತಿ ; ಅಧ್ಯಕ್ಷ ; ಉಪಾಧ್ಯಕ್ಷ ಹನಸಿ ; ಸಾಮಾನ್ಯ ; ಸಾಮಾನ್ಯ(ಮಹಿಳೆ)

ಮಾಲವಿ ; ಎಸ್ಸಿ(ಮಹಿಳೆ) ;ಸಾಮಾನ್ಯ ದಶಮಾಪುರ ;ಎಸ್ಸಿ ;ಸಾಮಾನ್ಯ (ಮಹಿಳೆ)

ಬೆಣಕಲ್ಲು ; ಸಾಮಾನ್ಯ(ಮಹಿಳೆ) ; ಎಸ್ಟಿ ಹಂಪಸಾಗರ ; ಸಾಮಾನ್ಯ(ಮಹಿಳೆ) ; ಸಾಮಾನ್ಯ ಮಹಿಳೆ

ಬನ್ನಿಕಲ್ಲು ; ಸಾಮಾನ್ಯ;ಎಸ್ಸಿ(ಮಹಿಳೆ) ಮೋರಗೇರಿ ; ಎಸ್ಸಿ(ಮಹಿಳೆ) ; ಸಾಮಾನ್ಯ

ಸೊನ್ನ ; ಎಸ್ಟಿ ; ಸಾಮಾನ್ಯ(ಮಹಿಳೆ) ತಂಬ್ರಹಳ್ಳಿ ; ಎಸ್ಟಿ(ಮಹಿಳೆ) ; ಸಾಮಾನ್ಯ

ಮರಬ್ಬಿಹಾಳು ; ಎಸ್ಸಿ ; ಸಾಮಾನ್ಯ(ಮಹಿಳೆ) ಮುತ್ಕೂರು ; ಸಾಮಾನ್ಯ ; ಎಸ್ಸಿ(ಮಹಿಳೆ)

ಬಾಚಿಗೊಂಡನಹಳ್ಳಿ ; ಎಸ್ಸಿ ; ಒಬಿಸಿ-ಎ(ಮಹಿಳೆ) ಬನ್ನಿಗೋಳ ; ಎಸ್ಸಿ(ಮಹಿಳೆ) ; ಸಾಮಾನ್ಯ

ಬ್ಯಾಸಿಗಿದೇರಿ ; ಸಾಮಾನ್ಯ ; ಎಸ್ಸಿ(ಮಹಿಳೆ) ಹಲಗಾಪುರ ; ಸಾಮಾನ್ಯ ; ಎಸ್ಟಿ(ಮಹಿಳೆ)

ಕಡಲಬಾಳು ; ಸಾಮಾನ್ಯ(ಮಹಿಳೆ) ; ಎಸ್ಸಿ ಹಂಪಾಪಟ್ಟಣ ; ಸಾಮಾನ್ಯ(ಮಹಿಳೆ) ; ಸಾಮಾನ್ಯ

ಮಾದೂರು ; ಸಾಮಾನ್ಯ(ಮಹಿಳೆ) ; ಎಸ್ಸಿ ನೆಲ್ಲುಕುದುರಿ ; ಸಾಮಾನ್ಯ ; ಎಸ್ಟಿ(ಮಹಿಳೆ)

ಗದ್ದಿಕೇರಿ ; ಒಬಿಸಿ-ಎ(ಮಹಿಳೆ) ;ಎಸ್ಸಿ ವಲ್ಲಭಾಪುರ ; ಎಸ್ಟಿ(ಮಹಿಳೆ) ; ಸಾಮಾನ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT