ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ‘ಅಹಿಂಸಾ ಓಟ’

Last Updated 3 ಏಪ್ರಿಲ್ 2023, 13:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಹಿಂಸಾ ಓಟ’ದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.

ಜೈನ್‌ ಇಂಟರ್‌ನ್ಯಾಷನಲ್‌ ಟ್ರೈಡ್‌ ಆರ್ಗನೈಜೇಶನ್‌ (ಜೆಐಟಿಒ) ಸಂಘಟನೆಯು ಸಾರ್ವಜನಿಕರಲ್ಲಿ ಅಹಿಂಸೆ ಕುರಿತು ಜಾಗೃತಿ ಮೂಡಿಸಲು ಈ ಓಟ ಹಮ್ಮಿಕೊಂಡಿತ್ತು. ನಗರದ ಪಿಬಿಎಸ್‌ ಶಾಲೆ ಬಳಿ ಎಂಎಸ್‌ಪಿಎಲ್‌ ಅಧ್ಯಕ್ಷ ನರೇಂದ್ರಕುಮಾರ ಬಲ್ದೋಟ ಅವರು ಓಟಕ್ಕೆ ಚಾಲನೆ ನೀಡಿದರು.

ಶಾಲೆಯಿಂದ ಆರಂಭಗೊಂಡ ಓಟವು ಡಾ.ಪುನೀತ್‌ ರಾಜ್‌ಕುಮಾರ್‌ ವೃತ್ತ, ಕನಕದಾಸ ವೃತ್ತದಿಂದ ಮೂಲಕ ಸಿದ್ಧಿಪ್ರಿಯ ಕಲ್ಯಾಣ ಮಂಟಪ ತಲುಪಿ ಅಲ್ಲಿಂದ ಪಿಬಿಎಸ್‌ ಶಾಲೆ ವರೆಗೆ ನಡೆಯಿತು. ಯುವಕ, ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದ 521 ಜನ ಓಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಅಧ್ಯಕ್ಷ ಕಾಂತಿಲಾಲ್‌ ಬಾಗರೇಚ್‌, ಮಹಿಳಾ ವಿಭಾಗದ ಅಧ್ಯಕ್ಷೆ ಮಧು ಚಾಜೇಡ್‌, ಯುವ ವಿಭಾಗದ ಅಧ್ಯಕ್ಷ ತಾತೇಡ್‌ ವರ್ಧಮಾನ, ಪ್ರಾಜೆಕ್ಟ್‌ ಅಧ್ಯಕ್ಷ ಹಿತೇಶ್‌ ಬಾಗರೇಚ, ಮಹಿಳಾ ವಿಭಾಗದ ಅಧ್ಯಕ್ಷೆ ನಿಕಿತಾ ರಾಥೋಡ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT