ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಜಾಗೃತಿ ಹೆಸರಲ್ಲಿ ಬಳೆ, ರವಿಕೆ ಕಣ: ಆಕ್ಷೇಪ

Published 28 ಏಪ್ರಿಲ್ 2024, 4:41 IST
Last Updated 28 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮತದಾನ ಜಾಗೃತಿ ಹೆಸರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಬಳೆ, ರವಿಕೆ ಕಣ, ಅರಿಶಿನ ಕುಂಕುಮ ನೀಡುತ್ತಿರುವುದಕ್ಕೆ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಅರಿಶಿನ ಕುಂಕುಮ ಪದ್ಧತಿ ಕೇವಲ ಹಿಂದೂಗಳಲ್ಲಿ ಇದೆ, ಹಾಗಿದ್ದರೆ ಕ್ರೈಸ್ತ, ಮುಸಲ್ಮಾನ ಮತದಾರರನ್ನು ಮತಗಟ್ಟೆಗೆ ಕರೆಸುವುದಿಲ್ಲವೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ.

‘ಅಂಗನವಾಡಿ ಕಾರ್ಯಕರ್ತರು ಮತ್ತು ಶಿಕ್ಷಕರ ಮೂಲಕ ಬಳೆ ಮತ್ತು ರವಿಕೆ ಕಣ ನೀಡಿ, ಒಂದು ವರ್ಗಕ್ಕೆ ಮಾತ್ರ ಅನ್ವಯವಾಗುವಂತೆ ಕಾರ್ಯಕ್ರಮ ಮಾಡುವುದರ ಹಿಂದಿನ ಉದ್ದೇಶ ಏನು? ಈ ಬಳೆ ಮತ್ತು ರವಿಕೆ ಕಣಗಳ ಪ್ರಾಯೋಜಕರು ಯಾರು? ಸರ್ಕಾರದಿಂದಲೇ ಆದೇಶವಿದ್ದು ಸರ್ಕಾರಿ ಹಣ ಇದಕ್ಕೆ ಬಳಕೆಯಾಗಿದೆಯೇ? ಜಿಲ್ಲಾಧಿಕಾರಿ ಅವರು ಸಾರ್ವಜನಿಕವಾಗಿ ಇದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಮಗೂ ಬಿರಿಯಾನಿ ಊಟ ಹಾಕಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಡಿ.ಸಿ ಸ್ಪಷ್ಟನೆ: ‘ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಆಗಿಲ್ಲ. ಬಳೆ, ರವಿಕೆ ಕಣ ಕೊಟ್ಟಿಲ್ಲ. ಅದಕ್ಕೆಲ್ಲ ದುಡ್ಡೂ ಮೀಸಲಿಟ್ಟಿಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT