ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡಿಗೆ ಬಿದ್ದು ಬಾಲಕನ ಸಾವು ಪ್ರಕರಣ: ನಗರಸಭಾ ಸದಸ್ಯರಿಂದ ಇಡೀ ದಿನ ಧರಣಿ

Published : 26 ಆಗಸ್ಟ್ 2024, 15:36 IST
Last Updated : 26 ಆಗಸ್ಟ್ 2024, 15:36 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ನಗರಸಭೆ ವ್ಯಾಪ್ತಿಯ ಅನಂತಶಯನಗುಡಿಯಲ್ಲಿ ಎರಡು ದಿನದ ಹಿಂದೆ ಖಾಸಗಿ ನಿವೇಶನದ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಚಂದ್ರಪ್ಪ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಿ ನಗರಸಭೆ ಸದಸ್ಯರು ಪಕ್ಷಾತೀತವಾಗಿ ಸೋಮವಾರ ಇಡೀ ದಿನ ನಗರಸಭೆ ಎದುರು ಧರಣಿ ನಡೆಸಿದರು.

ಪೌರಾಯುಕ್ತರ ಪ್ರತಿಕೃತಿಯೊಂದಿಗೆ ಧರಣಿ ಕುಳಿತ ಸದಸ್ಯರ ಜತೆಗೆ ಮೃತ ಬಾಲಕನ ಪೋಷಕರು, ಹಲವು ಸಂಘಟನೆಗಳ ಪ್ರಮುಖರು ಮತ್ತು ನೆರೆಹೊರೆಯವರು ಇದ್ದರು. ಸದ್ಯ  ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರೇ ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾರೆ.ರಾತ್ರಿಯಾಧರೂ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಶಾಸಕ ಎಚ್.ಆರ್‌.ಗವಿಯಪ್ಪ ಬರಲಿಲ್ಲ. ಆದರೆ, ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ಅವರು ಸಂಜೆ ಸ್ಥಳಕ್ಕೆ ಬಂದು ಸುರಿಯುತ್ತಿದ್ದ ಮಳೆಯಲ್ಲೇ ಧರಣಿ ನಿರತರಿಗೆ ಬೆಂಬಲ ಸೂಚಿಸಿದರು.

ಈ  ಮಧ್ಯೆ, ಜಮೀನು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆ ಹೊರತು ಪೌರಾಯುಕ್ತ ಚಂದ್ರಪ್ಪ ಅವರ ಅಮಾನತಿಗೆ ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿ ಮಾದಿಗ ಸಮಾಜದ ಮುಖಂಡರು ಸಂಜೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT