ಸೋಮವಾರ, ಆಗಸ್ಟ್ 15, 2022
22 °C

ಹೈಕಮಾಂಡ್ ನಿಲುವಿಗೆ ಬದ್ಧ: ಸಂಸದ ದೇವೇಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆದಿರುವ ಚರ್ಚೆ ಕುರಿತು ನಾನೇನೂ ಮಾತನಾಡಲಾರೆ. ನಾನು ಹೈಕಮಾಂಡ್ ನಿಲುವಿಗೆ ಬದ್ಧನಾಗಿದ್ದೇನೆ. ಯಾರ ಪರ, ವಿರುದ್ಧವಾಗಿ ಇಲ್ಲ’ ಎಂದು ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.

ಶನಿವಾರ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಕ್ಷದ ಹೈಕಮಾಂಡ್ ಪ್ರತಿಯೊಬ್ಬ ಕಾರ್ಯಕರ್ತರಿಗೆ ಮನೆಯ ಯಜಮಾನ ಇದ್ದಂತೆ. ಅವರು ಹೇಳಿದಂತೆ ಕೇಳುವ ಹಾಗೂ ನೀಡಿದ ಆದೇಶ ಪಾಲಿಸುತ್ತೇನೆ’ ಎಂದರು.

‘ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ, ಅತೃಪ್ತಿ, ಪರ, ವಿರೋಧ ಎನ್ನುವುದು ಅವರವರ ಭಾವನೆಗೆ ತಕ್ಕಂತೆ. ಹರಿಯುವ ನೀರಿನಂತೆ ಯಾರ ಮನಸ್ಸಿನಲ್ಲಿ ಏನಿದೆ ಅನ್ನುವುದು ಅರಿಯುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುಲಭವಲ್ಲ’ ಎಂದು ಶುಕ್ರವಾರ ದೇವೇಂದ್ರಪ್ಪ ಹೇಳಿಕೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು