ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ರಾಜಕಾರಣದಿಂದ ಸಹಬಾಳ್ವೆಗೆ ಕಂಟಕ: ಚಿಂತಕ ಚಂದ್ರ ಪೂಜಾರಿ

Last Updated 12 ಆಗಸ್ಟ್ 2022, 13:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸಾಂಸ್ಕೃತಿಕ ರಾಜಕಾರಣದ ಮೂಲಕ ಸಹಕಾರ, ಸಹಬಾಳ್ವೆ ಹಾಳುಗೆಡವಲಾಗುತ್ತಿದೆ’ ಎಂದು ಚಿಂತಕ ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.

‘ಆಲ್ ಇಂಡಿಯಾ ಡೆಮೊಕ್ರಟಿಕ್ ಯುತ್ ಆರ್ಗನೈಜೇಶನ್ (ಎಐಡಿವೈಒ) ಶುಕ್ರವಾರ ನಗರದ ವಾಲ್ಮೀಕಿ ಐ.ಟಿ.ಐ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಸಾಂಸ್ಕೃತಿಕ ರಾಜಕಾರಣ ಏನು? ಹೇಗೆ? ಯಾಕೆ?’ ವಿಷಯದ ಕುರಿತು ಮಾತನಾಡಿದರು.

ಪ್ರೀತಿ, ಪ್ರೇಮ, ಪರಸ್ಪರ ನಂಬಿಕೆ, ಮತ್ತೊಬ್ಬರ ಸ್ಥಾನದಲ್ಲಿ ನಿಂತು ಆಲೋಚಿಸುವ ಶಕ್ತಿ ಇವೆಲ್ಲ ಸಹಕಾರ, ಸಹಬಾಳ್ವೆಯ ಮೂಲದ್ರವ್ಯಗಳು. ಆದರೆ, ಇಂದಿನ ಯಜಮಾನಿಕೆಯ ಸಾಂಸ್ಕೃತಿಕ ರಾಜಕೀಯ ಈ ಮೂಲ ದ್ರವ್ಯಗಳನ್ನು ನಾಶ ಮಾಡುತ್ತಿದೆ ಎಂದರು.

ಪ್ರೀತಿ, ಪ್ರೇಮದ ಜಾಗದಲ್ಲಿ ದ್ವೇಷ ಕಾರುಬಾರು ಮಾಡುತ್ತಿದೆ. ನಂಬಿಕೆಯ ಬದಲು ಅಪನಂಬಿಕೆ, ಯಜಮಾನಿಕೆ ಮಾಡುತ್ತಿದೆ. ಮತ್ತೊಬ್ಬರ ಜಾಗದಲ್ಲಿ ನಿಂತು ಅವರ ಕಷ್ಟ ನಷ್ಟಗಳ್ನು ಅರ್ಥಮಾಡಿಕೊಳ್ಳುವ ಬದಲು ಪಕ್ಕದಲ್ಲಿರುವವರ ಕಷ್ಟ ನಷ್ಟಗಳು ಯಾವುದೇ ಭಾವನೆಗಳನ್ನು ಹುಟ್ಟಿಸಲು ವಿಫಲ ಆಗುತ್ತಿದೆ. ಇವೆಲ್ಲ ತುಂಬಾ ಆಪಾಯಕಾರಿ ಬೆಳವಣಿಗೆಗಳು. ಇವು ಭಾವನೆಗಳ ದಿವಾಳಿತನ. ಪ್ರೀತಿ, ಪ್ರೇಮ, ಪರಸ್ಪರ ನಂಬಿಕೆ ಇದ್ದರಷ್ಟೇ ಸಹಬಾಳ್ವೆ ಸಾಧ್ಯ ಎಂದು ಹೇಳಿದರು.

ಎಮ್ಮೆ ಹಾಲಿಗಿಂತ ದನದ ಹಾಲು ಉತ್ತಮ. ಮಾಂಸ ಆಹಾರಕ್ಕಿಂತ ತರಕಾರಿ ಉತ್ತಮ. ಮೊಟ್ಟೆಗಿಂತ ಬಾಳೆ ಹಣ್ಣು ಉತ್ತಮ ಎನ್ನುವ ನೇರ ಮತ್ತು ಪರೋಕ್ಷ ಸಂದೇಶ ತಳಸ್ತರದ ಜನರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಶೇ. 35ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತ ಅನುಭವಿಸುತ್ತಿದ್ದಾರೆ. ಶೇ.50ಕ್ಕಿಂತಲೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದರು.

ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಪ್ರಜ್ಷೆಯನ್ನು ಬೆಳೆಸಿಕೊಂಡರೆ ಸುತ್ತಲ ಶೋಷಿತ ಸಮಾಜ ಕಣ್ಣಿಗೆ ಕಾಣುತ್ತದೆ. ಈ ನಾಡಿನ ಮಹಾನ್ ಕ್ರಾಂತಿಕ್ರಾರಿಗಳ ಆದರ್ಶಗಳನ್ನು ನಾವು ಮೈಗೋಡಿಸಿಕೊಂಡರೆ ಪ್ರಸಕ್ತ ಸ್ಥಿತಿಯನ್ನು ಬದಲಾಯಿಸಬಹುದು ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಚೆನ್ನಬಸವ ಜಾನೇಕಲ್, ಜಿಲ್ಲಾ ಅಧ್ಯಕ್ಷ ಪ್ರಶಾಂತ್‌, ಉಪಾಧ್ಯಕ್ಷ ಎರಿಸ್ವಾಮಿ, ಪಾಲಾಕ್ಷ, ಪ್ರಕಾಶ್ ನಾಯಕ, ಅಜ್ಜಯ್ಯ, ಶೇಖರ್, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT