ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪದ ಸಾಹಿತ್ಯ ಪ್ರಚುರ ಪಡಿಸುವ ಅಗತ್ಯವಿದೆ: ಕಣಿವಿಹಳ್ಳಿ

Published : 2 ಜೂನ್ 2023, 13:48 IST
Last Updated : 2 ಜೂನ್ 2023, 13:48 IST
ಫಾಲೋ ಮಾಡಿ
Comments

ಹರಪನಹಳ್ಳಿ: ಪಟ್ಟಣದ ಹರಿಹರ ರಸ್ತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಸತಿನಿಲಯಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಗುರುವಾರ ಜರುಗಿತು.

ಚಿಗಟೇರಿ ಅಂಬಮ್ಮ ಮತ್ತು ಹನುಮಂತಪ್ಪ ದತ್ತಿ, ಹಾಲ್ಯಾನಾಯ್ಕ ಲಕ್ಷರಿನಾಯ್ಕ ದತ್ತಿ, ಕಸಾಪ ದತ್ತಿ, ಬಾಗಳಿ ಕೆಂಚಮ್ಮ ಮಾಗಳದ ಮಲ್ಲಿಕಾರ್ಜುನಪ್ಪ ದತ್ತಿ, ಬಾಗಳಿ ರಾಮನಗೌಡ ಹಾಲಮ್ಮ ಚನ್ನನಗೌಡ ದತ್ತಿ ಆಶಯದಂತೆ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಪನ್ಯಾಸ ನೀಡಿದ ವಕೀಲ ಕಣಿವಿಹಳ್ಳಿ ಮಂಜುನಾಥ, ‘ಹರಪನಹಳ್ಳಿ ನೆಲದಲ್ಲಿ ಸಾಹಿತ್ಯ ಲೋಕದ ಭೀಮವ್ವ, ಸೋಬಾನೆ ಪದ ಪರಂಪರೆಯ ಎಲಿಸವ್ವನಂತಹ ಪ್ರತಿಭಾನ್ವಿತ ಮಹಿಳೆಯರು ಪ್ರತಿಭೆ ಮೆರೆದಿದ್ದಾರೆ. ಜನಪದ ಸಾಹಿತ್ಯದಲ್ಲಿರುವ ಮಾನವೀಯ, ನೈತಿಕ ಮೌಲ್ಯಗಳನ್ನು ಪ್ರಚುರ ಪಡಿಸುವ ಅಗತ್ಯವಿದೆ’ ಎಂದರು.

ಬಿಸಿಎಂ ವಿಸ್ತರಣಾಧಿಕಾರಿ ಭೀಮಪ್ಪ, ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಉಚ್ಚಂಗೆಪ್ಪ ಮಾತನಾಡಿದರು. ಕಾರ್ಯದರ್ಶಿ ಆರ್.ಪದ್ಮರಾಜ್ ಜೈನ್, ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ, ಎಸ್.ಮಕಬುಲ್ ಬಾಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT