ಹಂಪಿ (ವಿಜಯನಗರ): ಚಿನ್ನಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಅವುಗಳ ಪ್ರೀತಿಯನ್ನು ನೋಡಿದ ಜನರು ಶ್ವಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಂಪಿ ಉತ್ಸವದ ಮೂರನೇ ದಿನ ಭಾನುವಾರ ಕಮಲಾಪುರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ನಡೆದ ಶ್ವಾನ ಪ್ರದರ್ಶನ ಪ್ರಾಣಿಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಪ್ರದರ್ಶನದಲ್ಲಿ ಮುಧೋಳ, ಪಪ್ಪಿ, ಡಾಬರ್ ಮನ್, ಲ್ಯಾಬ್ರೋಡಾರ್, ಜರ್ಮನ್ ಶೆಫರ್ಡ್, ಗ್ರೇಟ್ ಡೆನ್, ಸೈಬೆರಿಯನ್ ಹಸ್ಕಿ, ಪಿಟ್ ಬುಲ್, ಡ್ಯಾಶ್ ಹಂಡ್, ರಾಟ್ ವಿಲ್ಲರ್, ಬಾಕ್ಸರ್, ಕ್ಯಾನ್ ಕೂರ್ಸ್, ಚೌಚೌ, ಪಾಮ್ ಟಾಯ್, ಗ್ರೇಟ್ ಡೇನ್, ಸಿಕ್ಸ್ ಜೂ, ಪಾಮೆರಿಯನ್, ನೆಲ್ಜಿಯನ್, ಪಗ್, ಟಾಯ್, ಪೋಮ್ ತಳಿ ಸೇರಿದಂತೆ 18 ತಳಿಯ 80 ಶ್ವಾನಗಳ ಪ್ರದರ್ಶನ ಮೂರು ಗಂಟೆಗಳ ಕಾಲ ನಡೆಯಿತು.

ಕೆಲವು ತಳಿಯ ನಾಯಿಗಳು ನೋಡಲಿಕ್ಕೆ ಭಯ ಹುಟ್ಟಿಸುವಂತಿದ್ದರೂ ಸ್ನೇಹಮಯಿ ಆಗಿದ್ದವು. ಆರಂಭದಲ್ಲಿ ತಳಿಗಳವಾರು ಸ್ಪರ್ಧೆ ನಡೆಸಲಾಯಿತು. ವಯಸ್ಸು, ಬೆಳವಣಿಗೆ, ಅಂಗರಚನೆ, ವರ್ತನೆ ಆಧಾರದಲ್ಲಿ ಮೊದಲ ಸ್ಥಾನ ಪಡೆದ ನಾಯಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.

ಗದಗ ನೀಲಕಂಠ ಅವರ ಮುಧೋಳ ತಳಿ ನಾಯಿ ಪ್ರಥಮ, ಮರಿಯಮ್ಮನಹಳ್ಳಿಯ ಸತೀಶ್ ಚಿತ್ರಿ ಅವರ ಡಾಬರ್ ಮನ್ ದ್ವಿತೀಯ ಮತ್ತು ಕೊಟ್ಟೂರಿನ ಕೆ.ಪಿ. ಶಿವಕುಮಾರ್ ಅವರ ಲ್ಯಾಬ್ರೋಡಾರ್ ತೃತೀಯ ಸ್ಥಾನ ಪಡೆದವು. ಬಳಿಕ ನಾಯಿ ಮಾಲೀಕರಿಗೆ ಕ್ರಮವಾಗಿ ₹10,000, ₹ 7,500, ₹5,000 ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು. ಡಾ. ಮಂಜುನಾಥ, ಡಾ. ಬಾಳಪ್ಪನವರ ಸ್ಪರ್ಧೆಯ ನಿರ್ಣಾಯಕರಾಗಿದ್ದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಪೋಮಸಿಂಗ್, ಡಾ. ಮಲ್ಲಿಕಾರ್ಜುನ, ಡಾ. ಯುಗಂಧರ ಮಾನ್ವಿ, ಡಾ. ಸತೀಶ್, ಡಾ. ಸಂತೋಷ್, ಸಿಬ್ಬಂದಿ ಇದ್ದರು.

‘ಶ್ವಾನದ ಮೌಲ್ಯ ₹1.75 ಲಕ್ಷ’

ಹೊಸಪೇಟೆಯ ಡಾ. ಅರುಣ್ ಕುಮಾರ್ ಅವರ ಕೇನ್ ಕೋರ್ಸ್ ತಳಿಯ 8 ತಿಂಗಳ ಗಂಡು ನಾಯಿ ಬೆಲೆ ₹1.75 ಲಕ್ಷ. ಇದರ ಮಾಸಿಕ ನಿರ್ವಹಣೆಗೆ ₹ 40000 ಭರಿಸುತ್ತಿದ್ದಾರೆ. ಉತ್ತರ ಪ್ರದೇಶದಿಂದ ಈ ತಳಿ ಖರೀದಿಸಲಾಗಿದೆ. ಪೊಲೀಸ್ ಇಲಾಖೆಯ ಲೂಸಿ ಮತ್ತು ಲ್ಯಾಬ್ ನಡುಗೆ ಪ್ರದರ್ಶನದಲ್ಲಿ ಗಮನ ಸೆಳೆದವು. ಇವು ಈಗಾಗಲೇ ಹಲವು ಪ್ರಕರಣಗಳನ್ನು ಭೇದಿಸಿವೆ. ಪೊಲೀಸರು ಮತ್ತು ಶ್ವಾನಗಳಿಂದ ಅಣಕು ಪ್ರದರ್ಶನ ಮತ್ತು ನೆರಿದದ್ದ ಪ್ರೇಕ್ಷಕರಿಗೆ ಸೆಲ್ಯೂಟ್ ಹೊಡೆಸಿದ ದೃಶ್ಯಗಳು ನೋಡುಗರ ಮನಸೂರೆಗೊಂಡವು.

ಬೀದಿನಾಯಿಗಳಿಗೂ ಅವಕಾಶ: ಲಕ್ಷಾಂತರ ಮೌಲ್ಯದ ನಾಯಿಗಳ ಪ್ರದರ್ಶನದ ಮಧ್ಯೆ ನಾಲ್ಕು ಬೀದಿ ನಾಯಿಗಳನ್ನು ಮೆರೆಸಿದ ಯುವಕರು ನಾಜೂಕಿನ ಹೆಜ್ಜೆ ಹಾಕಿಸಿ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿದರು.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.