ಬುಧವಾರ, ಸೆಪ್ಟೆಂಬರ್ 22, 2021
21 °C

ವಿಜಯನಗರ: ಪ್ರಯಾಣಿಕ ರೈಲಿಗೆ ಐದು ಹೆಚ್ಚುವರಿ ಬೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಹುಬ್ಬಳ್ಳಿ–ಬಳ್ಳಾರಿ–ಹುಬ್ಬಳ್ಳಿ (ಗಾಡಿ ಸಂಖ್ಯೆ 07337/07338) ಪ್ರಯಾಣಿಕ ರೈಲಿಗೆ ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ.

ಈಗಿರುವ ರೈಲು ಗಾಡಿಗೆ ಎಂಟು ಬೋಗಿಗಳಿವೆ. ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದ ನಂತರ ಅವುಗಳ ಸಂಖ್ಯೆ 13ಕ್ಕೆ ಏರಲಿದೆ. ಬುಧವಾರದಿಂದ (ಆ.4) ಜಾರಿಗೆ ಬರುವಂತೆ ರೈಲಿಗೆ ಬೋಗಿಗಳನ್ನು ಅಳವಡಿಸಲಾಗುತ್ತದೆ.

‘ಹುಬ್ಬಳ್ಳಿ–ಬಳ್ಳಾರಿ ನಡುವೆ ನಿತ್ಯ ಸಂಚರಿಸುವ ಈ ಪ್ರಯಾಣಿಕ ರೈಲಿನ ಮೂಲಕ ಹೊಸಪೇಟೆ, ಕೊಪ್ಪಳ ಹಾಗೂ ಗದಗದಿಂದ ದಿನನಿತ್ಯ ನೂರಾರು ಜನ ಸಂಚರಿಸುತ್ತಾರೆ. ಒಂದು ರೀತಿಯಲ್ಲಿ ಈ ಭಾಗದ ಪ್ರಯಾಣಿಕರ ಲೈಫ್‌ಲೈನ್‌ ಆಗಿದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿತ್ತು’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌, ಕಾರ್ಯದರ್ಶಿ ಕೆ. ಮಹೇಶ್‌ ತಿಳಿಸಿದ್ದಾರೆ.

‘ರೈಲ್ವೆ ಸಲಹಾ ಸಮಿತಿ ಸದಸ್ಯ ಬಾಬುಲಾಲ್‌ ಜೈನ್‌ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ಒಟ್ಟಿನಲ್ಲಿ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯ ಕ್ರಮ ಸ್ವಾಗತಾರ್ಹವಾದುದು. ಕೋವಿಡ್‌ ಸಂದರ್ಭದಲ್ಲಿ ಜನ ಅಂತರ ಕಾಪಾಡಿಕೊಂಡು ಸಂಚರಿಸಲು ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.