ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ ಜಮೀನುಗಳಿಗೆ ಡಿಸಿ ಭೇಟಿ, ಪರಿಶೀಲನೆ

Published 6 ಅಕ್ಟೋಬರ್ 2023, 15:50 IST
Last Updated 6 ಅಕ್ಟೋಬರ್ 2023, 15:50 IST
ಅಕ್ಷರ ಗಾತ್ರ

ಕೊಟ್ಟೂರು: ಬರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರದ ತಂಡ ತಾಲ್ಲೂಕಿನ ತಿಮ್ಮಲಾಪುರ ಸಮೀಪದ ಜಮೀನುಗಳನ್ನು ಪರಿಶೀಲಿಸಲು ಶನಿವಾರ ಆಗಮಿಸುತ್ತಿರುವುದರಿಂದ ಮುಂಜಾಗ್ರತೆಯಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಅಧ್ಯಯನ ತಂಡದವರ ಗಮನಕ್ಕೆ ತರುವ ವಿಷಯಗಳ ಬಗ್ಗೆ ಕೃಷಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಮಾಹಿತಿ ಪಡೆದರು.

ತಾಲ್ಲೂಕಿನಾದ್ಯಂತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನೊಳಗೊಂಡು ಒಟ್ಟು 32,420 ಹೆಕ್ಟೇರ್ ಭೂಮಿ ಬಿತ್ತನೆ ಕಂಡಿತ್ತು. 30,710 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಮೆಕ್ಕೆಜೋಳ 26,557 ಹೆಕ್ಟೇರ್, ತೊಗರಿ 54 ಹೆಕ್ಟೇರ್, ಸಜ್ಜೆ 303 ಹೆಕ್ಟೇರ್, ಜೋಳ 746 ಹೆಕ್ಟೇರ್, ರಾಗಿ 1,503 ಹೆಕ್ಟೇರ್, ಶೇಂಗಾ 897 ಹೆಕ್ಟೇರ್, ನವಣೆ 2.6 ಹೆಕ್ಟೇರ್, ಸೂರ್ಯಕಾಂತಿ 636 ಹೆಕ್ಟೇರ್, ಹತ್ತಿ 6.07 ಹೆಕ್ಟೇರ್, ಹಲಸಂದಿ 2 ಹೆಕ್ಟೇರ್, ಈರುಳ್ಳಿ 1,212 ಹೆಕ್ಟೇರ್, ಮೆಣಸಿನಕಾಯಿ 286.58 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಶ್ಯಾಮ ಸುಂದರ್ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್, ಅಧಿಕಾರಿಗಳು ಇದ್ದರು.

6ಕೆಟಿಆರ್ ಇಪಿ3 – ಕೊಟ್ಟೂರು ತಾಲ್ಲೂಕಿನ ಹುಣಿಸಿಕಟ್ಟೆ ಗ್ರಾಮದಲ್ಲಿ ಮಳೆ ಇಲ್ಲದೆ ಮೆಕ್ಕೆಜೋಳ ಬೆಳೆ ಹಾನಿಯಾಗಿರುವುದು.
6ಕೆಟಿಆರ್ ಇಪಿ3 – ಕೊಟ್ಟೂರು ತಾಲ್ಲೂಕಿನ ಹುಣಿಸಿಕಟ್ಟೆ ಗ್ರಾಮದಲ್ಲಿ ಮಳೆ ಇಲ್ಲದೆ ಮೆಕ್ಕೆಜೋಳ ಬೆಳೆ ಹಾನಿಯಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT