ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 'ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರದಿರಿ'

Last Updated 16 ಜನವರಿ 2022, 10:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಬೇಷರತ್ತಾಗಿ ಈಡೇರಿಸಬೇಕು. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು’ ಎಂದು ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಎರಿಸ್ವಾಮಿ, ಕಾರ್ಯದರ್ಶಿ ಎನ್‌.ಎಲ್‌. ಪಂಪಾಪತಿ ಆಗ್ರಹಿಸಿದ್ದಾರೆ.

ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು. ಗೌರವ ಧನ ಎಷ್ಟೇ ಹೆಚ್ಚಿಸಿದರೂ ಪ್ರಯೋಜನವಿಲ್ಲ. ಮೊದಲು ಅವರಿಗೆ ಉದ್ಯೋಗ ಭದ್ರತೆ ಸಿಗಬೇಕು. ಸರ್ಕಾರ ತಾಳಿರುವ ಧೋರಣೆ ಸರಿಯಲ್ಲ. ರಾಜ್ಯದ ಸಾವಿರಾರು ಅತಿಥಿ ಉಪನ್ಯಾಸಕರು ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಬಹು ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಲೆ ಕೊಟ್ಟು ಬೇಡಿಕೆಗಳನ್ನು ಈಡೇರಿಸಬೇಕು. ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದುವರೆಗೆ ವಾರದಲ್ಲಿ 8 ರಿಂದ 10 ಗಂಟೆಗಳ ಕಾರ್ಯಭಾರಕ್ಕೆ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದವರಿಗೆ ₹11,000, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಇರುವವರಿಗೆ ₹13,000 ಮಾಸಿಕ ಗೌರವಧನ ಸಿಗುತ್ತಿತ್ತು. ಈಗ ಅವರ ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಿ ಅರ್ಹತೆಗನುಗುಣವಾಗಿ ₹28,000 ಮತ್ತು ₹32,999 ಮಾಸಿಕ ಗೌರವ ಧನ ಹೆಚ್ಚಿಸಲಾಗಿದೆ. ಕೆಲಸವನ್ನು ದ್ವಿಗುಣಗೊಳಿಸಿ, ಅದಕ್ಕನುಗುಣವಾಗಿ ಗೌರವಧನವನ್ನು ಹೆಚ್ಚಿಸಿದಂತಾಗಿದೆ. ವೇತನ ತಾರತಮ್ಯವನ್ನು ನಿವಾರಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಯಭಾರ ಹೆಚ್ಚಿಸುವುದರಿಂದ ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ 14564 ಅತಿಥಿ ಉಪನ್ಯಾಸಕರ ಬದಲಿಗೆ ಅರ್ಧ ಸಂಖ್ಯೆಯಷ್ಟು ಉಪನ್ಯಾಸಕರಿಗೆ ಮಾತ್ರ ಇನ್ನು ಮುಂದೆ ಕೆಲಸ ಸಿಗಲಿದೆ. ಕೆಲಸ ಕಳೆದುಕೊಳ್ಳುವವರ ಬಗ್ಗೆ ಸರ್ಕಾರ ಯಾವ ಮಾತನ್ನೂ ಆಡಿಲ್ಲ. ಇರುವ ಅತಿಥಿ ಉಪನ್ಯಾಸಕರಲ್ಲಿ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಇರುವವರು ಮತ್ತು ಅರ್ಹತೆ ಇಲ್ಲದವರು ಎಂದು ವಿಂಗಡಿಸಿ ಅವರಿಗೆ ನೀಡುವ ಗೌರವ ಧನದಲ್ಲಿಯೂ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT