ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ಪ್ರಥಮ ದರ್ಜೆ ಕಾಲೇಜು ಉತ್ತಮ ಸಾಧನೆ

Last Updated 1 ಫೆಬ್ರುವರಿ 2023, 13:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ‘ನ್ಯಾಕ್‌’ ಮಾನ್ಯತೆಯಲ್ಲಿ ಕಲಬುರಗಿ ವಿಭಾಗದಲ್ಲೇ ಅತ್ಯುತ್ತಮ ಸಾಧನೆ ತೋರಿದೆ.

ಕಾಲೇಜಿನ ಸಾಧನೆ ನೋಡಿ ‘ನ್ಯಾಕ್‌’ ಸಮಿತಿ ಬಿ++ ಗ್ರೇಡ್‌ ನೀಡಿದೆ. ಕಾಲೇಜು ಪ್ರಾರಂಭವಾದ ಹದಿನೈದು ವರ್ಷಗಳ ನಂತರ ಸಿಬ್ಬಂದಿ, ವಿದ್ಯಾರ್ಥಿಗಳ ಶ್ರಮದಿಂದ ಈ ಗೌರವ ದೊರೆತಿದೆ. ‘ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿಯ ಶ್ರಮದಿಂದ ಕಾಲೇಜಿಗೆ ಬಿ++ ಗ್ರೇಡ್‌ ದೊರೆತಿದೆ. ಇದು ಬಹಳ ಸಂತೋಷದ ವಿಷಯ’ ಎಂದು ಪ್ರಾಚಾರ್ಯ ನಟರಾಜ ಪಾಟೀಲ ತಿಳಿಸಿದ್ದಾರೆ.

ನ್ಯಾಕ್‌ ಮತ್ತು ಐಕ್ಯುಎಸಿ ಘಟಕಗಳ ಸಂಚಾಲಕ ಟಿ.ಎಚ್‌. ಬಸವರಾಜ ಇಡೀ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT