ಭಾನುವಾರ, ಜುಲೈ 3, 2022
25 °C

ನೂರು ಅರ್ಚಕರಿಗೆ ಆಹಾರ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸುತ್ತಿರುವ ನೂರು ಜನ ಅರ್ಚಕರಿಗೆ ಉದ್ಯಮಿ ಕಿಶೋರ್‌ ಪತ್ತಿಕೊಂಡ ಅವರು ಮಂಗಳವಾರ ಆಹಾರದ ಕಿಟ್‌ ವಿತರಿಸಿದರು.

10 ಕೆ.ಜಿ ಅಕ್ಕಿ, 1 ಕೆ.ಜಿ. ತೊಗರಿ ಬೆಳೆ, 1 ಕೆ.ಜಿ. ರವೆ, 1 ಲೀಟರ್‌ ಅಡುಗೆ ಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಒಳಗೊಂಡ ಒಟ್ಟು ₹1,250 ಮೌಲ್ಯದ ನೂರು ಆಹಾರ ಕಿಟ್‌ಗಳನ್ನು ವಿತರಿಸಿದರು. ಡಿವೈಎಸ್ಪಿ ವಿ. ರಘುಕುಮಾರ ಅವರು ಕಿಟ್‌ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.

‘ಅರ್ಚಕ ಕುಟುಂಬಗಳಿಗೆ ರೇಷನ್ ಕಾರ್ಡ್ ಇರೋದಿಲ್ಲ. ರೇಷನ್ ಕಾರ್ಡ್ ಇರೋರಿಗೆ ರೇಷನ್ ಸಿಗುತ್ತದೆ. ಆದರೆ, ಈ ಕುಟುಂಬಗಳಿಗೆ ಯಾರೂ ಸಹಾಯ ಮಾಡೊಲ್ಲ. ಅವರಿಗೆ ನೆರವಾಗಲು ಆಹಾರದ ಕಿಟ್‌ ವಿತರಿಸಲಾಗುತ್ತಿದೆ’ ಎಂದು ಕಿಶೋರ್‌ ಪತ್ತಿಕೊಂಡ ಹೇಳಿದರು.‌

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ಮಹಾಂತೇಶ್ ಸಜ್ಜನ್, ಶ್ರೀನಿವಾಸ್ ಮೇಟಿ, ಜಯಪ್ರಕಾಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು