ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ ರೈತರ ಜಮೀನು ನೇರ ಖರೀದಿಗೆ ವಿರೋಧ

ಪಿ.ಕೆ.ಹಳ್ಳಿ ಏತ ನೀರಾವರಿ–ಕೆರೆ ತುಂಬಿಸುವ ಕಾಮಗಾರಿ
Published 3 ಜನವರಿ 2024, 16:28 IST
Last Updated 3 ಜನವರಿ 2024, 16:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆಯಡಿಯಲ್ಲಿ ಕೆರೆಗೆ ನೀರು ತುಂಬಿಸುವುದಕ್ಕಾಗಿ ಪರಿಶಿಷ್ಟ ಜಾತಿ ರೈತರ ಜಮೀನುಗಳನ್ನು ಭೂಸ್ವಾಧೀನ ಕಯ್ದೆ ಉಲ್ಲಂಘಿಸಿ ನೇರ ಖರೀದಿಗೆ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬುಧವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಮುಖಂಡ ಎನ್‌.ಯಲ್ಲಾಲಿಂಗ ಮಾತನಾಡಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರ ವರದಿ ಇಲ್ಲದೆ ಈ ಜಮೀನುಗಳನ್ನು ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಸ್ವಾಧೀನಕ್ಕೆ ತೆಗೆದುಕೊಂಡಿರುವುದು ಸರಿಯಲ್ಲ. ಭೂ ವಂಚಿತರಿಗೆ ಮೂರು ಪಟ್ಟು ಪರಿಹಾರ ಮೊತ್ತ ಮತ್ತು ಸೂಕ್ತ ಪುನರ್ವಸತಿ ವ್ಯವಸ್ಥೆ ಮಾಡಿಯೇ ಭೂಸ್ವಾಧೀನ ಮಾಡಬೇಕು. ಇಲ್ಲಿ ಎಕರೆಗೆ ಕೇವಲ ₹13 ಲಕ್ಷದಂತೆ ಭೂಮಿ ಖರೀದಿಸಲು ಹೊರಟಿರುವುದು ಸರಿಯಲ್ಲ ಎಂದರು.

ಗಾದಿಗನೂರು, ಕೊಟಗಿನಾಳ ಗ್ರಾಮದ ಬಡ ರೈತರು ನೂರಾರು ವರ್ಷಗಳಿಂದ ಭೂಮಿ ನಂಬಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಜಮೀನು ಬಿಟ್ಟರೆ ಬೇರೆ ಗತಿಯೇ ಇಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದೆ ಗುತ್ತಿಗೆದಾರರ ಹೆಸರಿನಲ್ಲಿ ₹3 ಲಕ್ಷ, ₹ 5 ಲಕ್ಷ ಮುಂಗಡ ನೀಡಿ ಒಪ್ಪಂದ ಕರಾರು ಪತ್ರ ಮಾಡಿಕೊಂಡಿರುವುದು ಸರಿಯಲ್ಲ. ಕೊಟ್ಟ ಹಣ ವಾಪಸ್ ಪಡೆದು, ಕಾಮಗಾರಿ ಸ್ಥಗಿತಗೊಳಿಸಿ, ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಯೋಜಿನೆ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದರು.

ಸಿಐಟಿಯು ಮುಖಂಡ ಭಾಸ್ಕರ ರೆಡ್ಡಿ ಮಾತನಾಡಿ, ಬಡ ರೈತರ ಈ ನ್ಯಾಯೋಚಿತ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಹಂಪಿ ಉತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜೆ.ಕರಣಂ, ಅಣ್ವೇರಿ ಸ್ವಾಮಿ, ಕಣಿಮಪ್ಪ ಅಂಜನಿ, ಪ್ರಶಾಂತ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT