ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪ್ರಸಾದ ವಿತರಣೆ ಕೌಂಟರ್ ತೆರೆಯಲಾಯಿತು.

ಎರಡು ಲಡ್ಡು, ತೀರ್ಥ ಬಾಟಲಿ, ಕಲ್ಲುಸಕ್ಕರೆ ಒಳಗೊಂಡ ಬಟ್ಟೆ ಚೀಲದ ಪೊಟ್ಟಣಕ್ಕೆ ₹100 ನಿಗದಿಪಡಿಸಲಾಗಿದ್ದು, ಒಂದು ಲಡ್ಡು ಪ್ರಸಾದ ಬೇಕಿದ್ದರೆ ಅದಕ್ಕೆ ₹25 ನಿಗದಿಪಡಿಸಲಾಗಿದೆ.

‘ದೇವಸ್ಥಾನದ ಅವರಣದಲ್ಲೇ ಶುದ್ಧ ಆಕಳ ತುಪ್ಪ ಮತ್ತು ಹಾಲು ಬಳಸಿ ಲಡ್ಡು ತಯಾರಿಸಲಾಗುತ್ತಿದೆ. ಲಡ್ಡಿಗೆ ಎಣ್ಣೆ ಬಳಸುತ್ತಿಲ್ಲ. ತಿರುಪತಿ ತಿಮ್ಮಪ್ಪನ ಲಡ್ಡಿನ ಮಾದರಿಯಲ್ಲೇ ಇಲ್ಲಿನ ಲಡ್ಡು ಸಹ ಪರಿಮಳದಿಂದ ಕೂಡಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ತಿಳಿಸಿದರು.

ಸಾವಿರಾರು ಭಕ್ತರು: ಹೊಸ ವರ್ಷದ ಪ್ರಯುಕ್ತ ಗುರುವಾರ 40 ಸಾವಿರಕ್ಕೂ ಅಧಿಕ ಭಕ್ತರು ವಿರೂಪಾಕ್ಷನ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.