ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿಯಲ್ಲೇ ಇರುವ ಜನತಾ ಪ್ಲಾಟ್ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
.ಯಾವ ಸಚಿವರೂ ಇಲ್ಲದೆ ಕೊನೆಗೊಂಡ ಹಂಪಿ ಉತ್ಸವ.
ವಿರೂಪಾಕ್ಷ ದೇವಸ್ಥಾನದ ರಥಬೀದಿಯ ಸಮೀಪದಲ್ಲಿ ಸಾಲುಮಂಟಪಗಳ ಪಕ್ಕದಲ್ಲೇ ಜನತಾ ಪ್ಲಾಟ್ ಇದೆ. ಅಲ್ಲಿ ಸಾವಿರಾರು ಮಂದಿ ವಾಸ ಮಾಡುತ್ತಿದ್ದಾರೆ. ಕೆಲವರು ಅಂಗಡಿಗಳನ್ನು ಸಹ ಇಟ್ಟುಕೊಂಡಿದ್ದಾರೆ. ಇಂತಲ್ಲೇ ಚಿರತೆ ಬಂದಿದೆ.

ಅಪಾಯ ಉಂಟುಮಾಡಿಲ್ಲ: ‘ಹಂಪಿ ಭಾಗದಲ್ಲಿ ಚಿರತೆ ಇರುವುದು ಸಾಮಾನ್ಯ. ಅವುಗಳ ವಾಸಕ್ಕೆ ಯೋಗ್ಯವಾದ ಕಲ್ಲು ಗುಹೆಗಳು ಇಲ್ಲಿವೆ. ಚಿರತೆಗಳಿಂದ ಇದುವರೆಗೆ ಯಾರ ಪ್ರಾಣಕ್ಕೂ ಹಾನಿಯಾದ, ಜನರನ್ನು ಗಾಯಗೊಳಿಸಿದ ನಿದರ್ಶನ ಇಲ್ಲ. ಹೀಗಾಗಿ ಜನ ಗಾಬರಿಗೊಳ್ಳುವ ಅಗತ್ಯ ಇಲ್ಲ. ಚಿರತೆಗಳಿಗೆ ನಾಯಿಗಳು ಸುಲಭ ತುತ್ತು ಆಗಿರುವ ಕಾರಣ ಅವುಗಳು ಕೆಲವೊಮ್ಮೆ ಜನವಸತಿ ಪ್ರದೇಶಗಳಿಗೆ ಬರುತ್ತವೆ, ಮತ್ತೆ ಹೋಗುತ್ತವೆ, ಅವುಗಳ ವಾಸಸ್ಥಳ ಇದೇ ಕಡೆ ಎಂದು ಹೇಳುವುದೂ ಸಾಧ್ಯವಿಲ್ಲ’ ಎಂದು ಹೊಸಪೇಟೆ ಆರ್ಎಫ್ಒ ಕೌಶಿಕ್ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
.ಹಂಪಿ ಇತಿಹಾಸ ತಿಳಿಸಲು ಉಪನ್ಯಾಸ: ಶಾಸಕ ಎಚ್.ಆರ್.ಗವಿಯಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.