ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ ಪುರಸಭೆ ಆಡಳಿತ ವೈಖರಿಗೆ ಲೋಕಾಯುಕ್ತ ಅಸಮಾಧಾನ

Published 5 ಮಾರ್ಚ್ 2024, 15:50 IST
Last Updated 5 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಪುರಸಭೆ ಆಡಳಿತದ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಭೇಟಿ ನೀಡಿದ ಲೋಕಾಯುಕ್ತ ತಂಡವು ಪುರಸಭೆ ಆಡಳಿತ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ.

ಪಟ್ಟಣದ ಪುರಸಭೆ ಕಾರ್ಯಾಲಯ, ಕುಡಿಯುವ ನೀರು ಶುದ್ದೀಕರಣ ಘಟಕ, ನೀರು ಪೂರೈಕೆ ಮಾಡುವ ಕೆರೆ, ಘನತ್ಯಾಜ್ಯ ವಿಲೇವಾರ ಘಟಕಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ,‘ಪುರಸಭೆ ಆಡಳಿತ ಸಮರ್ಪಕವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಲೋಕಾಯುಕ್ತ ಎಸ್.ಪಿ ಟಿ.ಮಲ್ಲೇಶ್ ಅಸಮಾಧಾನ ವ್ಯಕ್ತಪಡಿಸಿದರು. 

ಪುರಸಭೆ ಆಡಳಿತ ವರ್ಗ ಸಾರ್ವಜನಿಕರ ಕುಂದು ಕೊರತೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಜನನ, ಮರಣ ಪ್ರಮಾಣ ಪತ್ರ, ಉತಾರಗಳನ್ನು ನೀಡಲು ತುಂಬಾ ವಿಳಂಬ ಮಾಡಲಾಗುತ್ತದೆ ಎಂದು ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಕಾರ್ಯಾಲಯದ ಮೇಲೆ ಇರುವ ಕುಡಿಯುವ ನೀರು ಸಂಗ್ರಹ ಸಿಂಟೆಕ್ಸ್ ನಲ್ಲಿ ಸಿಕ್ಕಾಪಟ್ಟೆ ಹೊಲಸು ಕಂಡು ಬಂದಿತು. ನೀರು ಶುದ್ದೀಕರಣ ಘಟಕದಲ್ಲಿ ನೀರು ಪಾಚಿಗಟ್ಟಿದೆ ಎಂದು ಪುರಸಭೆ ನೀರು ನಿರ್ವಹಣಾ ಎಂಜಿನಿಯರ್ ಗೆ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಇಲ್ಲದಿರುವ ಬಗ್ಗೆ ಅವರು ಆಕ್ಷೇಪಿಸಿದರು.

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಾಜ್ಯಗಳಿಗೆ ಬೆಂಕಿ ಹಚ್ಚಿರುವುದು, ಪಟ್ಟಣದಲ್ಲಿ ಸತ್ತಿರುವ ಹಂದಿಗಳನ್ನು ಅಲ್ಲಿ ಹೊರಗಡೆ ಬಿಸಾಡಿರುವುದು, ಎರೆ ಹುಳ ಸಿದ್ಧಪಡಿಸುವ ಶೆಡ್ ಖಾಲಿ ಇರುವುದು ಕಂಡು ಕಿರಿಯ ಆರೋಗ್ಯ ನಿರೀಕ್ಷರಿಂದ ವಿವರಣೆ ಪಡೆದು ತರಾಟೆಗೆ ತೆಗೆದುಕೊಂಡರು.

ಒಟ್ಟಾರೆ ಪುರಸಭೆ ಆಡಳಿತದಲ್ಲಿ ಸ್ವಚ್ಛತೆ ಕನಸಾಗಿದೆ. ಅಷ್ಟೊಂದು ಹೊಲಸು ಎಲ್ಲೆಲ್ಲೂ ಎದ್ದು ಕಾಣುತ್ತದೆ ಎಂದರು. ತಡವಾಗಿ ಬಂದ ಮುಖ್ಯಾಧಿಕಾರಿಗೆ ಪ್ರಶ್ನಿಸಲಾಗಿ ಶಾಸಕರು ಹೇಳಿದ ಕೆಲಸ ಮೇಲೆ ಹೋಗಿದ್ದಾಗಿ ಪ್ರತಿಕ್ರಿಯಿಸಿದರು.

ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ದಿಸೆಯಲ್ಲಿ ತಲುಪಿಸುವುದು ಲೋಕಾಯುಕ್ತ ದ ಪ್ರಮುಖ ಆಧ್ಯತೆಯಾಗಿದೆ ಎಂದು ಹೇಳಿದರು. ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ, ಪಿಎಸ್ಐ ಆನಂದ ರೆಡ್ಡಿ, ಆನಂದ ದೋಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT