40 ವರ್ಷವಾಯಿತು ಯಾರಿಗೂ ನಿವೇಶನ ಸಿಕ್ಕಿಲ್ಲ
‘ನಾನು ಕಳೆದ 40 ವರ್ಷಗಳಿಂದಲೂ ಹುತಾತ್ಮ ಸೈನಿಕರ ಕುಟುಂಬದವರ ಗೋಳನ್ನು ನೋಡುತ್ತ ಬಂದಿದ್ದೇನೆ ಯಾರೊಬ್ಬರಿಗೂ ಜಿಲ್ಲೆಯಲ್ಲಿ ಸರ್ಕಾರ ಕಡ್ಡಾಯವಾಗಿ ಕೊಡಬೇಕಾದ ನಿವೇಶನ ಕೊಟ್ಟೇ ಇಲ್ಲ. ಕೆಲವು ಜಿಲ್ಲಾಧಿಕಾರಿಗಳು ನಮ್ಮನ್ನು ಕಾಲ ಕಸದಂತೆ ಕಂಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಮಂಜುನಾಥ್ ಹೇಳಿದರು.