ಹೊಸಪೇಟೆ (ವಿಜಯನಗರ): ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲಬೆಲೆ (ಎಂಎಸ್ಪಿ) ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಅನ್ವಯ ಎಫ್ಎಕ್ಯೂ ಗುಣಮಟ್ಟದ ಆಹಾರಧಾನ್ಯ ಖರೀದಿ ಪ್ರಮಾಣ ಮತ್ತು ದರ ನಿಗದಿಪಡಿಸಿ ಮುಂಗಾರು ಋತುವಿನಲ್ಲಿ ಬಿಳಿಜೋಳವನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ.

ಎಂಎಸ್ಪಿ ಅಡಿಯಲ್ಲಿ ಆಹಾರಧಾನ್ಯಗಳ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಮಾರ್ಚ್ 31ರವರೆಗೆ ಪ್ರತಿ ಎಕರೆಗೆ 15 ಕ್ವಿಂಟಲ್ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ (ಹೈಬ್ರಿಡ್) ₹3,699 ಹಾಗೂ ಮಾಲ್ದಂಡಿ ಜೋಳ ₹3,749 ನಂತೆ ಖರೀದಿಸಲಾಗುತ್ತದೆ.

ಈಗಾಗಲೇ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಬಿಳಿಜೋಳವನ್ನು ಸರಬರಾಜು ಮಾಡಲು ನೋಂದಾಯಿಸಿಕೊಂಡಿರುವ ರೈತರಿಂದ ಖರೀದಿ ಪ್ರಕ್ರಿಯೆ ಕೂಡ ಆರಂಭಿಸಲಾಗಿದೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ನೋಂದಣಿ ಮತ್ತು ಖರೀದಿ ಕೇಂದ್ರಗಳ ವಿವರ: ಹೊಸಪೇಟೆ– ವಿದ್ಯಾರಣ್ಯ ಪಿಎಸಿಎಸ್ ಚಿತ್ತವಾಡ್ಗಿ, ಎಪಿಎಂಸಿ ಯಾರ್ಡ್, ಹಗರಿಬೊಮ್ಮನಹಳ್ಳಿ– ಪಿಎಸಿಎಸ್ ವರಲಹಳ್ಳಿ, ಎಪಿಎಂಸಿ ಯಾರ್ಡ್. ಕೂಡ್ಲಿಗಿ– ಪಿಎಸಿಎಸ್ ಕಕುಪ್ಪಿ ಹಾಗೂ ಎಪಿಎಂಸಿ ಯಾರ್ಡ್, ಅನ್ನದಾತ ಡಿಸಿಫ್ಪಿಸಿ ಚಿಕ್ಕಜೋಗಿಹಳ್ಳಿ, ಎಪಿಎಂಸಿ ಯಾರ್ಡ್ ಚಿಕ್ಕಜೋಗಿಹಳ್ಳಿ. ಕೊಟ್ಟೂರು– ಕೆ.ಅಯ್ಯನಹಳ್ಳಿ ಎಪಿಎಂಸಿ ಯಾರ್ಡ್ ಖಾನಹೊಸಹಳ್ಳಿ, ಉಜ್ಜಿನಿ. ಹೂವಿನಹಡಗಲಿ– ಟಿಎಪಿಸಿಎಂಸ್ ಹಾಗೂ ಎಪಿಎಂಸಿ ಯಾರ್ಡ್. ಹರಪನಹಳ್ಳಿ– ಪಿಎಸಿಎಸ್ ಚಿಗಟೇರಿ, ಎಪಿಎಂಸಿ ಯಾರ್ಡ್ ಮತ್ತು ಹರಪನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅರಸಿಕೆರೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ರೈತರು ಈ ಸದುಪಯೋಗಪಡೆಯಬೇಕೆಂದು ತಿಳಿಸಲಾಗಿದೆ.

ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ: ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳ ಖರೀದಿ ಯೋಜನೆಯಡಿ ಪ್ರತಿ ಎಕರೆಗೆ 12 ಕ್ವಿಂಟಲ್ಗಳಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕನುಗುಣವಾಗಿ ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಲ್ನಂತೆ ಗರಿಷ್ಠ ₹2,150 ನಿಗದಿಪಡಿಸಿದ ಬೆಂಬಲ ಬೆಲೆಗೆ ಮೆಕ್ಕೆಜೋಳ ಉತ್ಪನ್ನಕ್ಕೆ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮೆಕ್ಕೆಜೋಳ ಖರೀದಿ ಕೇಂದ್ರಗಳು

ಮೆಕ್ಕೆಜೋಳ ವಹಿವಾಟಿನ ಧಾರಣೆಯ ಆಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊಸಪೇಟೆ ಉಪ ಮಾರುಕಟ್ಟೆ ಪ್ರಾಂಗಣ ಮರಿಯಮ್ಮನಹಳ್ಳಿ ಎಪಿಎಂಸಿ ಹಗರಿಬೊಮ್ಮನಹಳ್ಳಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಹೂವಿನಹಡಗಲಿಯ ಮುಖ್ಯ ಮಾರುಕಟ್ಟೆ ಪ್ರಾಂಗಣ ಎಪಿಎಂಸಿ ಮತ್ತು ಹೊಳಲು ಎಪಿಎಂಸಿ ಹರಪನಹಳ್ಳಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಕೊಟ್ಟೂರು ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಕೂಡ್ಲಿಗಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.