ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಿಂದ ತ್ಯಾಜ್ಯ ತೆರವು

‘ಪ್ರಜಾವಾಣಿ’ ವರದಿ ಫಲಶ್ರುತಿ
Last Updated 25 ಮಾರ್ಚ್ 2021, 9:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ 22ನೇ ವಾರ್ಡ್‌ ವ್ಯಾಪ್ತಿಯ ಆಜಾದ್‌ ನಗರಕ್ಕೆ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಆರತಿ ಭೇಟಿ ನೀಡಿ, ರಸ್ತೆಯಲ್ಲೆಲ್ಲ ಹರಡಿಕೊಂಡಿದ್ದ ತ್ಯಾಜ್ಯವನ್ನು ಸಿಬ್ಬಂದಿಯಿಂದ ತೆರವುಗೊಳಿಸಿದರು.

‘ರಸ್ತೆಯಲ್ಲೂ ಕಸ, ನಿವೇಶನದಲ್ಲೂ ಕಸ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಗುರುವಾರ (ಮಾ. 24) ವರದಿ ಪ್ರಕಟಿಸಿತ್ತು. ವರದಿ ನೋಡಿ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಆರತಿ ಅವರು, ಪರಿಶೀಲನೆ ನಡೆಸಿದರು. ರಸ್ತೆಯ ತುಂಬೆಲ್ಲ ತ್ಯಾಜ್ಯ ಹರಡಿ, ಜನಸಾಮಾನ್ಯರ ಓಡಾಟಕ್ಕೆ ತೊಂದರೆ ಆಗುತ್ತಿರುವುದನ್ನು ಮನಗಂಡು, ಸ್ಥಳಕ್ಕೆ ಸಿಬ್ಬಂದಿ ಕರೆಸಿಕೊಂಡು, ಜೆಸಿಬಿ ಸಹಾಯದಿಂದ ತ್ಯಾಜ್ಯ ತೆರವುಗೊಳಿಸಿ, ಸ್ಥಳಾಂತರಿಸಿದರು.

‘ರಸ್ತೆಯ ನಿರ್ವಹಣೆ ನಗರಸಭೆಗೆ ಸೇರಿದ್ದು. ಹೀಗಾಗಿ ಅಲ್ಲಿ ಹರಡಿಕೊಂಡಿದ್ದ ತ್ಯಾಜ್ಯ ತೆಗೆಸಲಾಗಿದೆ. ನಿವೇಶನಗಳಲ್ಲಿ ತ್ಯಾಜ್ಯ ಹಾಕದಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ. ಅವರಿಗೂ ಇದರ ಬಗ್ಗೆ ತಿಳಿಸಲಾಗುವುದು’ ಎಂದು ಆರತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT