ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ, ಹಂಪಿ ಭಾಗದಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Published 19 ಮೇ 2024, 8:33 IST
Last Updated 19 ಮೇ 2024, 8:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ, ಕಮಲಾಪುರ, ಹಂಪಿ ಸಹಿತ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗಿನಿಂದ ಕೂಡಿದ ಬಿರುಸಿನ ಮಳೆ ಸುರಿಯಿತು.

ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾದ ಮಳೆ 20 ನಿಮಿಷ ಬಿರುಸಿನಿಂದ ಸುರಿಯಿತು. ಇದರಿಂದಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ನೆಮ್ಮದಿಯ ನಿಟ್ಟಿಸಿರು ಬಿಟ್ಟರು.

ಕಳೆದ ವಾರದಿಂದೀಚೆಗೆ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದರೂ ಅದು ಬಿರುಸು ಪಡೆದಿರಲಿಲ್ಲ. ಮಳೆಗಿಂತ ಹೆಚ್ಚಾಗಿ ಗಾಳಿಯ ರಭಸ ಜಾಸ್ತಿ ಇದ್ದ ಕಾರಣ ಹೊಸಪೇಟೆ ತಾಲ್ಲೂಕಿನ ಹಲವೆಡೆ ನೂರಾರು ಹೆಕ್ಟೇರ್‌ ಬಾಳೆ ತೋಟ ನಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT