ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸಪ್ಪ ತಾತ ರಥೋತ್ಸವ ಸಂಪನ್ನ

Published 10 ಮಾರ್ಚ್ 2024, 14:45 IST
Last Updated 10 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ ವರಕೇರಿ ಪ್ರದೇಶದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸದ್ಗುರು ಎಣ್ಣೇರಂಗ ಬಸವೇಶ್ವರ ದೇವಸ್ಥಾನದ ಹರಗಿಣಡೊಣಿ ಬಸಪ್ಪ ತಾತನವರ ರಥೋತ್ಸವ ಶನಿವಾರ ಸಂಜೆ ಜರುಗಿತು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸುತ್ತಮುತ್ತಲಿನ ಹಳ್ಳಿಗಳ ಜನರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಹೂವಿನ ರಥೋತ್ಸವ ದೇವಸ್ಥಾನದಿಂದ ಸಂಜೆ ಹೊರಟು ಐ.ಎಸ್.ಆರ್ ಮುಖ್ಯ ರಸ್ತೆಯಲ್ಲಿನ ಬನ್ನಿಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ ಪುನಃ ದೇವಸ್ಥಾನದ ಆವರಣಕ್ಕೆ ಬಂದಿತು.

ಯುವಕರಿಂದ ಕೋಲಾಟ, ಡೊಳ್ಳು ಕುಣಿತ, ಭಜನೆ, ಹಲಗೆ ವಾದನ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿಯ ಹೊನ್ನೂರಪ್ಪ, ಡಿ.ಈಶ್ವರಪ್ಪ, ಕಾಶಿನಾಥಪ್ಪ, ಎ.ಬಸವರಾಜ, ನಿಂಬಗಲ್ ರಾಮಕೃಷ್ಣ, ದಾನಪ್ಪ, ಹೊಸೂರಪ್ಪ, ಕಳವಳ್ಳಿ ಹೊನ್ನೂರಪ್ಪ, ಕೆ.ಎಲ್.ಆಚಾರಿ, ಗೋನಾಳ ಹುಲುಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT