ಹೊಸಪೇಟೆ (ವಿಜಯನಗರ): ತಾಲ್ಲೂಕು ಸಹಿತ ಜಿಲ್ಲೆಯ ವಿವಿಧೆಡೆ ಮಣ್ಣೆತ್ತಿನ ಅಮಾವಾಸ್ಯೆಯ ನಂತರದ ಮೊದಲ ಮಂಗಳವಾರ ಬಂಜಾರ (ಲಂಬಾಣಿ) ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ರೋಗ-ರುಜಿನಗಳು ದೂರವಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಈಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ದೇವತೆಗಳನ್ನು ಊರ ಹೊರಗೆ ಬೇವಿನಮರದ ಬುಡದಲ್ಲಿ ಪೂಜಿಸುವುದೇ ಈ ಆಚರಣೆಯ ಪ್ರಮುಖ ಅಂಶವಾಗಿದೆ.

ಸಮುದಾಯದವರು ಭಕ್ತಿ ಭಾವದಿಂದ ಏಳು ಮಾತೆಯರನ್ನು ಪ್ರತಿಬಿಂಬಿಸುವ ದೇವತೆಗಳನ್ನು ಪ್ರತಿಷ್ಠಾಪಿಸಿದರು. ಮರದ ಏಳು ಕೊಂಬೆಯ ತುಂಡುಗಳಲ್ಲದೆ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಿದರು.

ಮಾತೆಯರ ಪ್ರತಿಬಿಂಬದ ಹಿಂದೆ ‘ಲೂಕಡ್’ (ಸೇವಕ) ನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಬಳಿಕ, ಕುರಿ-ಕೋಳಿ ಹರಕೆ ಹೊತ್ತ ಭಕ್ತರು ಲೂಕಡ್ಗೆ ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಸಲ್ಲಿಸುತ್ತಾರೆ.

ಐತಿಹ್ಯ: ಪುತ್ರ ಸಂತಾನ ಇಲ್ಲದೆ ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಸಮಾಜದ ಹಿರಿಯ ಭೀಮಾನಾಯ್ಕ ಮಕ್ಕಳ ಸಂತಾನಪ್ರಾಪ್ತಿಗಾಗಿ ಕಠಿಣ ತಪಸ್ಸಿಗೆ ಕೂರುತ್ತಾನೆ. ಈ ಸಂದರ್ಭದಲ್ಲಿ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪದ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರಂತೆ. ಸ್ನಾನದ ಸಂದರ್ಭದಲ್ಲಿ ಮೈಉಜ್ಜುವಾಗ ಕಾಣಿಸಿಕೊಂಡ ಮಣ್ಣಿನಿಂದಲೇ ಮಾತ್ರೆಗಳಂತೆ ಉಂಡೆ ಮಾಡಿ ತಪಸ್ವಿ ಭೀಮಾನಾಯ್ಕನ ಪತ್ನಿ ಧರ್ಮೀಬಾಯಿಗೆ ಸೇವಿಸಲು ನೀಡಿದರಂತೆ. ಈ ಏಳು ಮಂದಿ ಮಾತೆಯರು ನೀಡಿದ ಮಾತ್ರೆ ಸೇವನೆಯ ಪರಿಣಾಮ ಜನಿಸಿದ ಮಹಾಮಹಿಮನೇ ಸೇವಾಲಾಲ್ ಎಂಬುದು ಬಂಜಾರ ಸಮುದಾಯದ ನಂಬಿಕೆ.

ಅದರಂತೆ ಇಂದಿಗೂ ಸೀತ್ಲಾ ಹಬ್ಬದ ಆಚರಣೆ ರೂಢಿಯಲ್ಲಿದೆ ಹಾಗೂ ಸಮುದಾಯದವರು ಭಕ್ತಿ ಭಾವದಿಂದ ಇದರಲ್ಲಿ ಪಾಲ್ಗೊಂಡು ಆಚರಣೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.