ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ನಗರ ಕಾಲೇಜಿನತ್ತ ವಿದ್ಯಾರ್ಥಿಗಳ ಒಲವು

ಗ್ರಾಮೀಣ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ
Published 19 ಜೂನ್ 2023, 23:55 IST
Last Updated 19 ಜೂನ್ 2023, 23:55 IST
ಅಕ್ಷರ ಗಾತ್ರ

ವಿಶ್ವನಾಥ ಡಿ.

ಹರಪನಹಳ್ಳಿ: ಗ್ರಾಮೀಣ ಭಾಗದ ಸರ್ಕಾರಿ ಪಿಯು ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಪ್ರಮಾಣ ಕುಸಿತ ಕಂಡಿದ್ದು, ಪಟ್ಟಣದ ಸರ್ಕಾರಿ ಕಾಲೇಜಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂಧನೆ ಸಿಕ್ಕಿದೆ.

ಪ್ರವೇಶ ಪ್ರಕ್ರಿಯೆ ಮುಕ್ತಾಯದ ಜೂನ್ 15ಕ್ಕೆ ಪಟ್ಟಣದಲ್ಲಿ 1 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 6 ಒಟ್ಟು 7 ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಪ್ರಥಮ ಪಿಯುಸಿಗೆ 526, ದ್ವಿತೀಯ ಪಿಯುಸಿಗೆ 415 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶತಮಾನ ಪೂರೈಸಿದ ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಗಳಿದ್ದು ಪ್ರಥಮ ಪಿಯುಸಿಗೆ 306, ದ್ವಿತೀಯ ವರ್ಷಕ್ಕೆ 192 ವಿದ್ಯಾರ್ಥಿಗಳು ಹಾಗೂ ಕಂಚಿಕೇರೆ ಗ್ರಾಮದ ಪಿಯು ಕಾಲೇಜ್ ನಲ್ಲಿ ಒಟ್ಟು 158 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕಟ್ಟಡದ ಸುತ್ತ ಕಾಂಪೌಂಡ್ ವ್ಯವಸ್ಥೆ ಇಲ್ಲದ ಕಾರಣ, ರಾತ್ರಿ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಇಲ್ಲಿ ಎರಡು ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಅಗತ್ಯತೆ ಇದೆ.

ಉತ್ತಮ ಕಟ್ಟಡ ಹೊಂದಿರುವ ಚಿಗಟೇರಿ ಪಿಯು ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್, ರಾಜಕೀಯ ಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ದಂತಹ ಸುಲಭದ ವಿಷಯಗಳಿದ್ದರೂ ಎರಡು ವರ್ಷಗಳಲ್ಲಿ ದಾಖಲಾದ ವಿದ್ಯಾರ್ಥಿ
ಗಳ ಸಂಖ್ಯೆ ಕೇವಲ 28. ಇಲ್ಲಿನ ಉಪ
ನ್ಯಾಸಕರು ಮನೆ ಮನೆಗೆ ತೆರಳಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ಮಾದಿಹಳ್ಳಿ ಪಿಯು ಕಾಲೇಜಿನಲ್ಲೂ ಇದೇ ಪರಿಸ್ಥಿತಿಯಿದ್ದು ಕೇವಲ 36 ವಿದ್ಯಾರ್ಥಿಗಳಿದ್ದಾರೆ. ಲಕ್ಷ್ಮೀಪುರ ಪಿಯು ಕಾಲೇಜಿನಲ್ಲಿ 100 ವಿದ್ಯಾರ್ಥಿ
ಗಳು ಪ್ರವೇಶ ಪಡೆದಿದ್ದಾರೆ.

72 ವಿದ್ಯಾರ್ಥಿಗಳಿರುವ ಶಿಂಗ್ರಿಹಳ್ಳಿ ಕಾಲೇಜಿಗೆ ಎರಡು ಕೊಠಡಿಗಳ ಅಗತ್ಯವಿದೆ.

‘ಕಾಲೇಜು ಇರುವೆಡೆ ಹಾಸ್ಟೆಲ್ ಸೌಲಭ್ಯ ಇಲ್ಲದಿರುವುದು, ಉಪನ್ಯಾಸಕರ ಹುದ್ಧೆ ಖಾಲಿ ಇರುವುದು ಮತ್ತು ನಗರದ ವ್ಯಾಮೋಹದಿಂದಾಗಿ ಗ್ರಾಮೀಣ ಭಾಗದ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿ
ಗಳು ನಗರ ಪ್ರದೇಶಗಳತ್ತ ಮುಖ ಮಾಡು
ತ್ತಿರುವ ಕಾರಣದಿಂದ ವಿದ್ಯಾರ್ಥಿಗಳು ನಮ್ಮ ಕಾಲೇಜುಗಳಿಗೆ ನಿರಾಸಕ್ತಿ ತೋರು
ತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಚಿಸದ ಪ್ರಾಚಾರ್ಯರೊಬ್ಬರು ತಿಳಿಸಿದರು.

‘ಬಳ್ಳಾರಿ ಜಿಲ್ಲೆಯಲ್ಲಿ 19 ವಿಜಯ
ನಗರ ಜಿಲ್ಲೆಯಲ್ಲಿ 28 ಸರ್ಕಾರಿ ಪಿಯು ಕಾಲೇಜುಗಳಿವೆ. 141 ಉಪನ್ಯಾಸಕ ಹುದ್ದೆ ಖಾಲಿ ಇವೆ. 152 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ದಾಖಲಾತಿ ಹೆಚ್ಚಿಸಲು ಸ್ಥಳೀಯರನ್ನು ಒಳಗೊಂಡು ಸಮಿತಿ ರಚಿಸಿ, ಕಾರ್ಯೋನ್ಮುಖರಾಗಿದ್ದೇವೆ. ಉಪನ್ಯಾಸಕರ ಕೊರತೆ ಆಗದಂತೆ ಅತಿಥಿ ಉಪನ್ಯಾಸಕರ 15 ಅರ್ಜಿ ಕಾಯ್ದಿರಿಸಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಜಿಲ್ಲಾ ನಿರ್ದೇಶಕರಾದ ಎಂ.ಟಿ.ಗಿರೀಶ್ ಪ್ರತಿಕ್ರಿಯಿಸಿದರು.

ಗ್ರಾಮೀಣ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ
ಗಳಿಗೆ ಉಚಿತ ಪ್ರವೇಶಕ್ಕೆ ಅವ ಕಾಶ ಕಲ್ಪಿಸಿ ಕಾಲೇಜು ಇರುವ ಸ್ಥಳದಲ್ಲಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು ಬಳಿಗನೂರು ಕೊಟ್ರೇಶ್ಎಐಎಸ್ಎಫ್ ರಾಜ್ಯ ಕಾರ್ಯದರ್ಶಿ

'ಅನುಮತಿ ಪತ್ರ ನೋಡಿಯೇ ದಾಖಲಾಗಿ’ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸದಾಗಿ ಪಿಯು ಕಾಲೇಜು ಆರಂಭಕ್ಕೆ ಹಲವು ಖಾಸಗಿ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಅವುಗಳ ಪೈಕಿ ಕಂಪ್ಲಿಯಲ್ಲಿ ಮಾತ್ರ ಒಂದು ಖಾಸಗಿ ಕಾಲೇಜಿಗೆ ಅನುಮತಿ ದೊರೆತಿದೆ. ಆದರೂ ಸಹ ಕೆಲ ಖಾಸಗಿ ಸಂಸ್ಥೆಯವರು ಅನುಮತಿ ಸಿಕ್ಕಿದೆ ಎಂದು ಸುಳ್ಳು ಹೇಳಿ ಪ್ರವೇಶ ಪಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಅನುಮತಿ ಪತ್ರ ಪಡೆದಿರುವ ಸಂಸ್ಥೆಗಳಲ್ಲಿ ಮಾತ್ರ ಪ್ರವೇಶ ಕೊಡಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಜಿಲ್ಲಾ ನಿರ್ದೇಶಕ ಎಂ.ಟಿ.ಗಿರೀಶ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT