ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಟ್ ಉತ್ತಮ ಲಯದಲ್ಲಿದ್ದಾರೆ: ವಿಕ್ರಮ್

Published 16 ಜೂನ್ 2024, 16:31 IST
Last Updated 16 ಜೂನ್ 2024, 16:31 IST
ಅಕ್ಷರ ಗಾತ್ರ

ಲಾಡೆರ್‌ಹಿಲ್, ಫ್ಲಾರಿಡಾ: ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಯಾವುದೇ ಚಿಂತೆ ಇಲ್ಲ. ಅವರು ಉತ್ತಮ ಲಯದಲ್ಲಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ. 

‘ನಾನು ಪ್ರತಿಬಾರಿ ಸುದ್ದಿಗೋಷ್ಠಿಗೆ ಬಂದಾಗಲೂ ವಿರಾಟ್ ಕುರಿತ ಪ್ರಶ್ನೆ ಇರುತ್ತದೆ. ಹೆಚ್ಚು ಚಿಂತೆ ಇಲ್ಲ. ಅವರು ಉತ್ತಮವಾಗಿ ಅಭ್ಯಾಸ ನಡೆಸಿದ್ದಾರೆ. ಐಪಿಎಲ್‌ನಲ್ಲಿ ಅವರ ಶ್ರೇಷ್ಠ ಬ್ಯಾಟಿಂಗ್ ನೋಡಿದ್ದೇವೆ. ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ. ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ ಅದರಿಂದ ಅವರು ಕುಗ್ಗಿಲ್ಲ’ ಎಂದು ಸುದ್ದಿಗಾರರಿಗೆ ವಿಕ್ರಮ್ ತಿಳಿಸಿದರು. 

‘ಅವರಿಗೆ ಹೆಚ್ಚು ರನ್‌ ಗಳಿಸಬೇಕು ಎಂಬ ಹಸಿವು ಇದೆ. ಇದರಿಂದಾಗಿ ಅವರು ಒಮ್ಮೆ ದೊಡ್ಡ ಇನಿಂಗ್ಸ್ ಆಡಲು ಶುರು ಮಾಡಿದರೆ ಹಿಂತಿರುಗಿ ನೋಡುವುದಿಲ್ಲ. ಅವರಿಂದ ಶ್ರೇಷ್ಠ ಇನಿಂಗ್ಸ್‌ಗಳು ಇನ್ನಷ್ಟೇ ಬರಬೇಕಿದೆ’ ಎಂದರು. 

ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಮೂರು ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಎರಡಂಕಿ ಗಳಿಸಲಿಲ್ಲ. 

ಎ ಗುಂಪಿನಲ್ಲಿ ಭಾರತವು ಆಡಬೇಕಿದ್ದ ಕೆನಡಾ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಭಾರತ ತಂಡವು ಸೂಪರ್ 8ರ ಹಂತ ಪ್ರವೇಶಿಸಿದೆ.

ವಿಕ್ರಮ್ ರಾಥೋಡ್
ವಿಕ್ರಮ್ ರಾಥೋಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT