ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ ಈಗ 77.14 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಬುಧವಾರ ಸಂಜೆ ಆರು ಕ್ರೆಸ್ಟ್ಗೇಟ್ಗಳನ್ನು ಎರಡು ಅಡಿ ಎತ್ತರಕ್ಕೆ ಎತ್ತಿ 17,635 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು.

14 ರಿಂದ 18 ಹಾಗೂ 21, 22ನೇ ಗೇಟ್ಗಳನ್ನು ಮಾತ್ರ ತೆರೆಯಲಾಗಿದ್ದು, ಧುಮ್ಮಿಕ್ಕಿ ಹರಿಯುವ ನೀರನ್ನು ನೋಡಲು ಜನರು ಅಣೆಕಟ್ಟೆ ಕೆಳಭಾಗದಲ್ಲಿ ಗುಂಪುಗೂಡಿ ಬರತೊಡಗಿದ್ದಾರೆ.

ಸದ್ಯ ಜಲಾಶಯದ ಒಳಹರಿವಿನ ಪ್ರಮಾಣ 32,767 ಕ್ಯೂಸೆಕ್ ಇದೆ. 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ 1,625.20 ಅಡಿ ಮಟ್ಟದಲ್ಲಿ ನೀರಿದೆ. 105.78 ಟಿಎಂಸಿ ಅಡಿಯಷ್ಟು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈ ಬಾರಿ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುವುದು. ಒಳಹರಿವು ಅಧಿಕವಾದರೆ ಇನ್ನಷ್ಟು ಗೇಟ್ಗಳನ್ನು ತೆರೆದು ನೀರು ಹರಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.