ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಗೆ ರೈಲ್ವೆ ಕ್ರಿಯಾ ಸಮಿತಿ ಒತ್ತಾಯ

Published 9 ಫೆಬ್ರುವರಿ 2024, 16:07 IST
Last Updated 9 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ರೈಲು ನಿಲ್ದಾಣವನ್ನು ಶುಕ್ರವಾರ ಪರಿವೀಕ್ಷಿಸಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹಾಗೂ ಹಿರಿಯ ಅಧಿಕಾರಿಗಳಿಗೆ ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ರೈಲ್ವೆ ಬೇಡಿಕೆಗಳನ್ನು ಸಲ್ಲಿಸಿದರು.

‘ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಹನಗಳು ಮತ್ತು ಸಾರ್ವಜನಿಕರ ದಟ್ಟಣೆ ತಗ್ಗಿಸಲು ಅಂಡರ್ ಪಾಸ್ ಎಲ್‍ಸಿ ಗೇಟ್ 37ಕ್ಕೆ ಮೇಲು ಸೇತುವೆ ಮತ್ತು ಎಲ್‍ಸಿ ಗೇಟ್ 38ಕ್ಕೆ ಕೆಳ ಸೇತುವೆ ನಿರ್ಮಾಣ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಪ್ಲಾಟ್ ಫಾರಂ, ಮೂಲಸೌಕರ್ಯದ ಜೊತೆಗೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು’ ಎಂದು ಒತ್ತಾಯಿಸಲಾಯಿತು.

‘ಬಳ್ಳಾರಿ, ಹೊಸಪೇಟೆ ಮಾರ್ಗದಲ್ಲಿ ಅಧಿಕ ರೈಲು ಸಂಚಾರಕ್ಕೆ ಅನುಕೂಲವಾಗುವಂತೆ ಕಾರಿಗನೂರಿನಲ್ಲಿ ಪ್ರಯಾಣಿಕರ ಗಾಡಿಗಳ ಕೋಚಿಂಗ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಾಗಾರವನ್ನು ಸ್ಥಾಪಿಸಬೇಕು ಹಾಗೂ ಕೊಟ್ಟೂರು-ದಾವಣಗೆರೆ ಮಾರ್ಗವಾಗಿ ಹೊಸಪೇಟೆ-ತುಮಕೂರು ನಡುವೆ ದಿನವಹಿ ಪ್ಯಾಸೆಂಜರ್ ರೈಲು ಆರಂಭಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ-ಗುಂತಕಲ್ ನಡುವೆ ರೈಲು ಸಂಚಾರವನ್ನು 6 ತಿಂಗಳಿಂದ ಕಾರಣವಿಲ್ಲದೆ ತೋರಣಗಲ್‌ಗೆ ಮೊಟಕುಗೊಳಿಸಲಾಗಿದೆ. ಈ ರೈಲನ್ನು ಕೂಡಲೇ ಬಳ್ಳಾರಿಗೆ ವಿಸ್ತರಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.

ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಅರವಿಂದ ಜಾಲಿ, ಪಿ.ಆರ್.ತಿಪ್ಪೇಸ್ವಾಮಿ, ಡಿ.ಪ್ರಭಾಕರ್, ಶಿವಕುಮಾರ್ ಸಾಂಚಿ, ಸತೀಶ್‍ಪಾಟೀಲ್, ಉಮಾಶಂಕರ್, ಎಚ್.ಎಂ.ಮಂಜುನಾಥ, ಜೆ.ವರುಣ್, ಪಲ್ಲೇದ್ ಸಿದ್ದೇಶ್, ಎಲ್.ರಮೇಶ್, ಬಿ.ಲೋಕೆಶ್, ಬಿ.ವಿಶ್ವನಾಥ, ಬಿ.ಮಂಜುನಾಥ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT