ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರದಲ್ಲಿ ಟರ್ಕಿ ದೇಶದ ಸಜ್ಜೆ: ವಿನೂತನ ಪ್ರಯೋಗಕ್ಕೆ ಮುಂದಾದ ರೈತರು

Published 29 ಸೆಪ್ಟೆಂಬರ್ 2023, 7:43 IST
Last Updated 29 ಸೆಪ್ಟೆಂಬರ್ 2023, 7:43 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಬರಗಾಲದ ಹೊಡೆತಕ್ಕೆ ರೈತಾಪಿ ವರ್ಗ ಒಂದೆಡೆ ಕಂಗಾಲಾಗಿದ್ದು, ಇತ್ತ ಸಮೀಪದ ಸಿದ್ದಾಪುರ ಗ್ರಾಮದ ರೈತರು ವಿಶೇಷ ತಳಿಯ ಸಜ್ಜೆ ಬೆಳೆಯೂವ ಮೂಲಕ ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.

ಸಿದ್ದಾಪುರ ಗ್ರಾಮದ ರೈತರಾದ ಶೇಖರಪ್ಪ, ನಿವೃತ್ತ ಶಿಕ್ಷಕ ಮನೋಹರ್, ಪ್ರದೀಪ್ ಹಾಗೂ ಮಹಾಂತೇಶ್ ಅವರು ಟರ್ಕಿ ದೇಶದ ವಿಶೇಷ ತಳಿಯ ಸಜ್ಜೆ ಬಿತ್ತನೆ ಮಾಡಿ ಅಲ್ಪ ಮಳೆಯಲ್ಲಿಯೂ ಮೂರು ತಿಂಗಳಲ್ಲಿಯೇ ಹೆಚ್ಚು ಉದ್ದ ಹಾಗೂ ಎತ್ತರದ ಸಜ್ಜೆ ಬೆಳೆದು, ಉತ್ತಮ ಇಳುವರಿ ಕಂಡಿದ್ದಾರೆ. ಮಳೆ ಇಲ್ಲದೇ ಮುಗಿಲೂ ನೋಡುತ್ತಿದ್ದ ರೈತರು ಇದೀಗ ಈ ಸಜ್ಜೆಯ ಕಡೆ ಮುಖ ಮಾಡಿದ್ದಾರೆ.

ಟರ್ಕಿ ದೇಶದ ತಳಿಯಾಗಿರುವ ಈ ಸಜ್ಜೆಯೂ ಸಾಧಾರಣ ಸಜ್ಜೆ ತೆನೆಗಿಂತ ನಾಲ್ಕು ಪಟ್ಟು ಉದ್ದ ಬೆಳೆದಿದ್ದು, ಮೂರು ಅಡಿ ತೆನೆ ಗಮನ ಸೆಳೆಯುತ್ತಿದೆ. ಎಕರೆಗೆ ನಾಲ್ಕು ಪಟ್ಟು ಇಳುವರಿ ಬರಲಿದೆ. ಉತ್ತಮ ಮಳೆಯಾದರೆ ದೇಸಿಯ ಸಜ್ಜೆಯೂ ಎಕರೆಗೆ 6-7 ಕ್ವಿಂಟಲ್ ಬಂದರೇ ಟರ್ಕಿ ತಳಿ 20-25 ಕ್ವಿಂಟಲ್ ಇಳುವರಿ ಬರಲಿದೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಈ ಬಾರಿ ಬಿತ್ತನೆಯಾಗಿರುವ ಟರ್ಕಿ ತಳಿಯ ಸಜ್ಜೆ ಎಕರೆಗೆ 10-15 ಕ್ವಿಂಟಲ್ ಇಳುವರಿ ಬರಲ್ಲಿದೆ ಎನ್ನುತ್ತಾರೆ ರೈತರು.

‘ಪ್ರಯೋಗಿಕವಾಗಿ ಸಿದ್ದಾಪುರ ಗ್ರಾಮದ ನಾಲ್ವರು ರೈತರು 10 ಎಕರೆಯಲ್ಲಿ ಈ ಸಜ್ಜೆ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ ಬಂದಿದೆ. ಮಳೆಯಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಿತ್ತು. ಅಲ್ಪ ಮಳೆಗೂ ಉತ್ತಮ ಇಳೂವರೆ ಬಂದಿದೆ. ಈ ತಳಿಯಿಂದ ರೈತರ ಆದಾಯ ಹೆಚ್ಚಾಗಲಿದೆ’ ಎನ್ನುತ್ತಾರೆ ರೈತ ಮನೋಹರ್.

‘ಯೂಟ್ಯೂಬ್‌ನಲ್ಲಿ ಈ ತಳಿಯ ಬಗ್ಗೆ ನೋಡಿದ ರೈತರು ಇಳಕಲ್ಲಿನ ರೈತರೊಬ್ಬರು ರಾಜಸ್ಥಾನದಿಂದ ₹2,000ಕ್ಕೆ 1 ಕೆ.ಜಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದನ್ನು ನೋಡಿದ ರೈತರು ಅವರ ಬಳಿಯಿಂದ ₹1,000ಕ್ಕೆ 1ಕೆಜಿಯಂತೆ ಬೀಜ ಖರೀದಿಸಿ ತಂದು ಸುಮಾರು ಹತ್ತು ಎಕ್ಕರೆಯಲ್ಲಿ ಬಿತ್ತನೆ ಮಾಡಿದ್ದಾರೆ. ನಮ್ಮ ತಳಿಗೂ ಇದರ ಕಾಳುಗಳಿಗೇನು ಭಿನ್ನವಿಲ್ಲ. ತೇನೆ ಉದ್ದ ಬೆಳೆಯುತ್ತದೆ. ಜತೆಗೆ ಮೇವು ಸಹ ಹೆಚ್ಚು ಸಿಗುತ್ತದೆ. ಇದರಿಂದ ಮಾಮೂಲಿ ಸಜ್ಜೆಗಿಂತ ನಾಲ್ಕು ಪಟ್ಟು ಇಳುವರಿ ಸಿಗಲಿದೆ. ಮಳೆಯ ಕೊರತೆಯ ನಡುವೆಯೂ ಉತ್ತಮವಾಗಿ ಕಾಳು ಕಟ್ಟಿದೆ’ ಎಂದು ರೈತ ಪ್ರದೀಪ್ ಹೇಳಿದರು.

‘ಸದ್ಯ ಸಜ್ಜೆಗೆ ಮಾರುಕಟ್ಟೆಯಲ್ಲಿ ₹2,000ಕ್ಕೂ ಅಧಿಕ ಬೆಲೆ ಇದೆ. ನಮಗೆ ಮಾರಾಟ ಮಾಡುವ ಉದ್ದೇಶವಿಲ್ಲ. ನಮ್ಮ ಭಾಗದ ರೈತರಿಗೆ ಬೀಜಕ್ಕೆ ಮಾರಾಟ ಮಾಡಿ ಈ ಬೆಳೆಯ ಬಗ್ಗೆ ರೈತರಿಗೆ ತಿಳಿಸುತ್ತೇವೆ’ ಎಂದು ರೈತ ಶೇಖರಪ್ಪ, ಪ್ರದೀಪ್ ಹೇಳಿದರು.

ಕಾನಹೊಸಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ವಿಶೇಷ ತಳಿಯ ಸಜ್ಜೆ ಬೆಳೆದಿರುವ ರೈತರು
ಕಾನಹೊಸಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ವಿಶೇಷ ತಳಿಯ ಸಜ್ಜೆ ಬೆಳೆದಿರುವ ರೈತರು
ವಿಶೇಷ ತಳಿಯ ಸಜ್ಜೆ
ವಿಶೇಷ ತಳಿಯ ಸಜ್ಜೆ
ವಿಶೇಷ ತಳಿಯ ಸಜ್ಜೆ
ವಿಶೇಷ ತಳಿಯ ಸಜ್ಜೆ
ಮೂರು ಅಡಿಗೂ ಹೆಚ್ಚು ಉದ್ದನೆಯ ತೆನೆ ಎಕರೆಗೆ ನಾಲ್ಕು ಪಟ್ಟು ಇಳುವರಿ ಸಜ್ಜೆಯ ಕಡೆ ಮುಖ ಮಾಡಿದ ರೈತರು
ಸಾಧಾರಣ ಸಜ್ಜೆಗಿಂತ ಉತ್ತಮ ಇಳುವರಿ
ರೈತರೂ ಸ್ವತಃ ತಾವೇ ಹೊಸ ತಳಿಗಳನ್ನು ಬೇರೆಡೆಯಿಂದ ತಂದು ಪ್ರಯೋಗಿಸಿರುವುದು ಖುಷಿಯ ವಿಚಾರ. ನಮ್ಮ ತಾಲ್ಲೂಕಿನ ರೈತರು ಇತರರಿಗೂ ಮಾದರಿಯಾಗಿದ್ದಾರೆ. ರೈತರಿಂದ ರೈತರು ಖರೀದಿಸಿರುವುದರಿಂದ ಈ ತಳಿಯೂ ಟರ್ಕಿಯದೇ ಎನ್ನುವುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸಾಧಾರಣ ಸಜ್ಜೆಗಿಂತ ಉತ್ತಮ ಇಳುವರಿ ಬಂದಿದೆ ಎಂದು ಕೂಡ್ಲಿಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ್ ಎಂ.ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT