ಹೊಸಪೇಟೆ (ವಿಜಯನಗರ): ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಎಂಸಿಎಚ್) ಬುಧವಾರ ಹಗರಿಬೊಮ್ಮನಹಳ್ಳಿಯ ಪಟ್ಟಣದ ರಾಮನಗರ ನಿವಾಸಿ ಪರ್ವಿನ್ ಬಾನು ಅವರು ಅವಳಿ ಗಂಡುಮಕ್ಕಳನ್ನು ಹೆತ್ತಿದ್ದು, ಮಕ್ಕಳು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ತನಗೆ ಮಕ್ಕಳನ್ನು ನೋಡುವ ಭಾಗ್ಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

‘ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಿಲ್ಲ ಎಂಬ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕಳುಹಿಸಿದ್ದರು. ಮಧ್ಯಾಹ್ನ 1.30ಕ್ಕೆ ಬಂದರೂ, ರಾತ್ರಿ 8ರ ವರೆಗೆ ನನ್ನನ್ನು ಬಂದು ವೈದ್ಯರು ನೋಡಿಲ್ಲ. ಸ್ಟಾಫ್ ನರ್ಸ್ ಮಾತ್ರ ಗಮನಿಸುತ್ತಿದ್ದರು’ ಎಂದು ಪರ್ವಿನ್ ಬಾನು ದೂರಿದರು.

ಡಿಎಚ್ಒ ನಿರಾಕರಣೆ: ‘ತಾಯಿಗೆ ಸಹಜ ಹೆರಿಗೆಯೇ ಆಗಿದೆ, ಆದರೆ ಮಕ್ಕಳು ಹುಟ್ಟುತ್ತಲೇ ನೀಲಿ ಬಣ್ಣಕ್ಕೆ ತಿರುಗಿದ್ದರು. ಹೃದಯದ ತೊಂದರೆ ಇದ್ದರೆ ಇಂತಹ ಲಕ್ಷಣ ಕಾಣಿಸುತ್ತದೆ. ಸಿಸೇರಿಯನ್ ಮಾಡಿದ್ದರೂ ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆಯೇ ಇತ್ತು, ವೈದ್ಯರ ನಿರ್ಲಕ್ಷ್ಯ ಆಗಿಲ್ಲ. ಹೀಗಿದ್ದರೂ ಮಕ್ಕಳ ಸಾವಿಗೆ ಕಾರಣ ಏನು ಎಂಬುದನ್ನು ನಿಖರವಾಗಿ ತಿಳಿಯುವ ಪ್ರಯತ್ನ ನಡೆಯಲಿದೆ’ ಎಂದು ಡಿಎಚ್ಒ ಡಾ.ಎಲ್.ಆರ್.ಶಂಕರ್ ನಾಯ್ಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.