ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ನದಿಗೆ ಬಿದ್ದಿದ್ದ ಬಾಲಕನನ್ನು ರಕ್ಷಿಸಲು ಹೋದ ಯುವಕನೂ ಸಾವು

Published 18 ಏಪ್ರಿಲ್ 2024, 14:41 IST
Last Updated 18 ಏಪ್ರಿಲ್ 2024, 14:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಬುಕ್ಕಸಾಗರದ ಸೇತುವೆ ಸಮೀಪ ತುಂಗಭದ್ರಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಐದು ವರ್ಷದ ಬಾಲಕನನ್ನು ರಕ್ಷಿಸಲು ಯತ್ನಿಸಿದ 30 ವರ್ಷದ ಯುವಕನೂ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಕಮಲಾಪುರ ‍ಪಿಆರ್‌ಟಿ ಕ್ಯಾಂಪ್‌ನ ನಿವಾಸಿಗಳಾದ ತರಣ್‌ (5) ಮತ್ತು ರಮೇಶ (30) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

‘ನದಿ ತೀರದಲ್ಲಿ ಆಟವಾಡುತ್ತಿದ್ದ ತರುಣ್‌ ಆಕಸ್ಮಿಕವಾಗಿ ನೀರಿಗೆ ಬಿದ್ದ. ಅವನನ್ನು ರಕ್ಷಿಸಲು ನನ್ನ ದೊಡ್ಡಪ್ಪನ ಮಗ ರಮೇಶ ಸಹ ನೀರಿಗೆ ಬಿದ್ದ. ಆತನಿಗೆ ಈಜು ಬರುತ್ತಿರಲಿಲ್ಲವಾದ ಕಾರಣ ಆತನೂ ನೀರಲ್ಲಿ ಮುಳುಗಿದ’ ಎಂದು ಬಾಲಕನ ತಂದೆ ಎ.ಚಂದ್ರಶೇಖರ ಅವರು ಕಮಲಾಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT