ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ ವಿಶೇಷ ಗ್ರಾಮಸಭೆಗಳನ್ನು ನಡೆಸಿ ಕೇಂದ್ರ ಸರ್ಕಾರ ನರೇಗಾ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.

ನಾಗೇನಹಳ್ಳಿ, ಮಲಪನಗುಡಿ, ಹಂಪಿ, ಪಾಪಿನಾಯಕನಹಳ್ಳಿ, 114 ಡಣಾಪುರ, ಬೈಲವದ್ದಿಗೇರಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ನೇತೃತ್ವದಲ್ಲಿ ಪಿಡಿಒಗಳು, ಸದಸ್ಯರು, ಊರಿನ ಪ್ರಮುಖರು, ನರೇಗಾ ಕಾರ್ಮಿಕರು ಪಾಲ್ಗೊಂಡು ಜಿ ರಾಮ್ ಜಿ ಯನ್ನು ಒಕ್ಕೊರಲಿನಿಂದ ವಿರೋಧಿಸಿದರು.

‘ಹಳೆಯ ಉದ್ಯೋಗ ಖಾತ್ರಿ ಕಾಯ್ದೆ ಮುಂದುವರಿಯಬೇಕು, ಅದರಲ್ಲಿ ಸಣ್ಣ ರೈತರಿಗೆ ಸಾಕಷ್ಟು ಅನುಕೂಲಗಳು ಇದ್ದವು. ಹೊಲಗಳಲ್ಲಿ ಬದುಗಳು, ಕೃಷಿ ಹೊಂಡಗಳು, ದನದ ಕೊಟ್ಟಿಗೆ, ಎರೆಹುಳ ತೊಟ್ಟಿ, ಕುರಿ ಶೆಡ್ ನಿರ್ಮಾಣ, ಇಂಗು ಗುಂಡಿಗಳು, ಕೆರೆ, ಅರಣ್ಯೀಕರಣ, ಹಳ್ಳ ಹೂಳೆತ್ತುವುದು.. ಹೀಗೆ ಅನೇಕ ಕೆಲಸಗಳನ್ನು ಸಣ್ಣ ರೈತರು ಮಾಡಿಕೊಳ್ಳಬಹುದಾಗಿತ್ತು’ ಎಂದು ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

‘ಹೊಸ ಯೋಜನೆಯಲ್ಲಿ ಈ ತರಹದ ಯಾವ ಅಂಶಗಳೂ ಇಲ್ಲ. ನಮ್ಮ ಗ್ರಾಮ ಪಂಚಾಯಿತಿ ಸಣ್ಣ ರೈತರಿಂದ ಕೂಡಿದ್ದು, ಅದರಲ್ಲೂ ಮಳೆಯಶ್ರಿತ ರೈತರು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿದ್ದಾರೆ’ ಎಂದೂ ತಿಳಿಸಲಾಯಿತು.

ಯಾವುದೇ ಕಾರಣಕ್ಕೂ ಹೊಸ ವಿಬಿ ಜಿ ರಾಮ್ ಜಿ ಯೋಜನೆ ನಮಗೆ ಬೇಡ ಎನ್ನುವ ನಿರ್ಣಯ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.