ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿಯತ್ತ ಮಾಲಾಧಾರಿಗಳ ಪಾದಯಾತ್ರೆ

Published 23 ಡಿಸೆಂಬರ್ 2023, 15:47 IST
Last Updated 23 ಡಿಸೆಂಬರ್ 2023, 15:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹನುಮ ಜಯಂತಿ ಪ್ರಯುಕ್ತ ಹನುಮ ಮಾಲೆ ಧರಿಸಿದ ಭಕ್ತರು ಶನಿವಾರ ತಂಡೋಪತಂಡವಾಗಿ ಹೊಸಪೇಟೆ, ಕಮಲಾಪುರ ಮೂಲಕ ಹಂಪಿಗೆ ಬಂದು, ಅಂಜನಾದ್ರಿಯತ್ತ ತೆರಳಿದರು.

ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಪ್ಪಳ ಸಹಿತ ದೂರದ ಊರುಗಳಿಂದ ಬಂದ ಭಕ್ತರು ಹೊಸಪೇಟೆ ಮೂಲಕ ಪಾದಯಾತ್ರೆಯಲ್ಲಿ ಹಂಪಿಗೆ ಬಂದು ಕೆಲವರು ಅಲ್ಲೇ ತಂಗಿದರು. ಇನ್ನು ಕೆಲವರು ಅಂಜನಾದ್ರಿಯತ್ತ ತೆರಳಿದರು. ಕೆಲವರು ಆನೆಗುಂದಿಯಲ್ಲಿ ಶನಿವಾರ ರಾತ್ರಿ ವಿಶ್ರಾಂತಿ ಪಡೆದರು. ಹೊಸಪೇಟೆಯ ನೂರಾರು ಮಂದಿ ಸಹ ಶನಿವಾರವೇ ಪಾದಯಾತ್ರೆ ಆರಂಭಿಸಿದರು.

ಪುಟಾಣಿ ಮಕ್ಕಳು ಸಹ ಕೇಸರಿ ಬಟ್ಟೆ ಧರಿಸಿ ಪಾದಯಾತ್ರೆ ನಡೆಸಿದರು. ಕೆಲವರು ಪೋಷಕರ ಹೆಗಲೇರಿ ಕುಳಿತಿದ್ದರು. ಹಂಪಿ ರಸ್ತೆ ಶನಿವಾರ ಕೇಸರಿಮಯವಾಗಿತ್ತು. ದಾರಿ ಮಧ್ಯೆ ಹಲವೆಡೆ ಪಾನಕ, ಮಜ್ಜಿಗೆ, ನೀರು ವಿತರಿಸಲಾಗುತ್ತಿತ್ತು. ಹಲವಾರು ಮಂದಿ ಹಂಪಿಯ ಸಾಲು ಮಂಟಪಗಳಲ್ಲಿ, ಯಂತ್ರೋದ್ಧಾರಕ ದೇವಸ್ಥಾನ ಸಮೀಪದ ಮಂಟಪಗಳಲ್ಲಿ ತಂಗಿದರು.

‘ಹನುಮ ಮಾಲಾಧಾರಿಗಳು ಭಾನುವಾರ ಅಂಜನಾದ್ರಿ ಬೆಟ್ಟದ ಮೇಲೆ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಆದರೆ ಸಾವಿರಾರು ಮಂದಿ ಶನಿವಾರವೇ ಪಾದಯಾತ್ರೆಯಲ್ಲಿ ಹಂಪಿ ಮೂಲಕ ತೆರಳಿದ್ದಾರೆ. ಭಾನುವಾರ ಲಕ್ಷಾಂತರ ಮಂದಿ ಅಂಜನಾದ್ರಿಗೆ ಬರಲಿದ್ದು, ಬೆಟ್ಟ ಏರುವುದಕ್ಕೆ ಕನಿಷ್ಠ ನಾಲ್ಕು ಗಂಟೆ ಸಮಯ ಹಿಡಿಯಬಹುದು’ ಎಂದು ಹೊಸಪೇಟೆಯಿಂದ ಪಾದಯಾತ್ರೆ ಕೈಗೊಂಡಿರುವ ಮಾಲಾಧಾರಿ ಅನೂಪ್‌ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT