ಭಾನುವಾರ, ಮಾರ್ಚ್ 26, 2023
24 °C

ದೇಶದ ಅಭಿವೃದ್ಧಿಗೆ ಯುವಜನಾಂಗವೇ ಆಧಾರ–ಗೆಹಲೋತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಈ ದೇಶದ ಅಭಿವೃದ್ಧಿಗೆ ಯುವಜನಾಂಗವೇ ಆಧಾರ’ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಭಿಪ್ರಾಯಪಟ್ಟರು. 

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ 30ನೇ ನುಡಿಹಬ್ಬದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಈ ದೇಶ ಯುವ ದೇಶವಾಗಿದೆ. ಶೇ 60ರಷ್ಟು ಜನ ಯುವಕರೇ ಇದ್ದಾರೆ. ಅವರ ಮೇಲೆ ಇಡೀ ದೇಶ ನಿಂತಿದೆ. ದೇಶದ ಅಭಿವೃದ್ಧಿಗೆ ಅವರೇ ಆಧಾರ’ ಎಂದರು.

ಯುವಕರು ಸನ್ಮಾರ್ಗದಲ್ಲಿ ನಡೆದು, ಪರಿಶ್ರಮದಿಂದ ಮೇಲೆ ಬರಬೇಕು. ಜನಹಿತಕ್ಕಾಗಿ ಕೆಲಸ ಮಾಡಬೇಕು. ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿದೆಯೋ ಅದರಲ್ಲಿಯೇ ಮುಂದುವರೆಯಬೇಕು. ಆಚಾರ, ವಿಚಾರ, ಸಂಸ್ಕಾರ, ಮಾನವೀಯತೆ ಬೆಳೆಸಿಕೊಳ್ಳಬೇಕು. ಆಗ ಜೀವನ ಸಫಲವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರತಿ ವ್ಯಕ್ತಿ ಸಮಾಜದಿಂದ ಗೌರವ ಬಯಸುತ್ತಾನೆ. ಅದಕ್ಕಾಗಿ ಪ್ರಯತ್ನಿಸುತ್ತಾನೆ. ಏಕಾಗ್ರತೆಯಿಂದ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಅದು ತಾನಾಗಿಯೇ ಒಲಿಯುತ್ತದೆ. ಅದಕ್ಕೆ ಇಂದಿನ ಸಮಾರಂಭದಲ್ಲಿ ನಾಡೋಜ ಗೌರವದಿಂದ ಸನ್ಮಾನಿತರಾದವರೇ ನಿದರ್ಶನ ಎಂದರು.
ಕನ್ನಡ ವಿಶ್ವವಿದ್ಯಾಲಯ ತನ್ನ ಕೆಲಸದ ಮೂಲಕ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳು ದೇಶದ ಗೌರವ ಹೆಚ್ಚಿಸುವ ಕೆಲಸ ಮಾಡಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು