ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶೀಘ್ರ ಕ್ರಿಯಾ ಯೋಜನೆ: ಜಮೀರ್ ಅಹ್ಮದ್

Published 9 ಆಗಸ್ಟ್ 2023, 8:32 IST
Last Updated 9 ಆಗಸ್ಟ್ 2023, 8:32 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ಜಿಲ್ಲೆ ವಿಜಯ ನಗರದ ಪ್ರತಿ ತಾಲ್ಲೂಕಿನ ಸಮಸ್ಯೆ ಅರಿಯುವ ದೃಷ್ಟಿತಿಯಿಂದಲೇ ತಾಲ್ಲೂಕುವಾರು ಕೆಡಿಪಿ ಸಭೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೊಸ ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರ ದಲ್ಲಿ ಸಾಕಷ್ಟು ಸಮಸ್ಯೆ ಇದೆ. ಹೀಗಾಗಿ ಪ್ರತಿ ತಾಲ್ಲೂಕಿನ ಕೆಡಿಪಿ ಸಭೆ ನಡೆಸಿ ವಾಸ್ತವ ಅರಿತು ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಕಳೆದ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ 19 ಇಲಾಖೆ ಗಳ ಕಚೇರಿಗಳು ಇರಲಿಲ್ಲ. ಇದೀಗ 11 ಕಚೇರಿ ಸ್ಥಾಪಿಸಲಾಗಿದೆ. ಅಗತ್ಯ ಸಿಬ್ಬಂದಿ ಸಹ ನೇಮಿಸಲಾಗುವುದು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜು ಸೇರಿದಂತೆ ಹೊಸ ಜಿಲ್ಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು. ಸಕ್ಕರೆ ಕಾರ್ಖಾನೆ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು ತಾಲ್ಲೂಕು ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಆರಂಭಿ ಸಲಾಗಿರುವ ಸಿಬ್ಬಂದಿ ಹಾಜರಾತಿ ಬಯೋಮೆಟ್ರಿಕ್ ವ್ಯವಸ್ಥೆಯ ಇ ಕಚೇರಿ, 11 ಇಲಾಖಾ ಕಚೇರಿ ಗಳಿಗೆ ಚಾಲನೆ ನೀಡಿದರು.

ಮಾಜಿ ಶಾಸಕ ಸಿರಾಜ್ ಶೇಖ್, ಜಿಲ್ಲಾಧಿಕಾರಿ ದಿವಾಕರ್, ಹೆಚ್ಚುವರಿ ಡಿಸಿ ಅನುರಾಧ, ಎಸ್ ಪಿ ಹರಿಬಾಬು, ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ, ಮುಖಂಡ ಇಮಾಮ್ ನಿಯಾಜಿ ಉಪಸ್ಥಿತರಿದ್ದರು.

ಮಾಲಾರ್ಪಣೆ

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬುಧವಾರ ಬೆಳಿಗ್ಗೆ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಅಂಗವಾಗಿ ರಾಷ್ಟ್ರ ಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಉದ್ಯಮಿಗಳಿಗೆ ಬೆದರಿಕೆ- ಆರೋಪ ಅಲ್ಲಗಳೆದ ಸಚಿವ: ವಿಜಯನಗರ ಜಿಲ್ಲೆಯಲ್ಲಿರುವ ಉದ್ಯಮಿಗಳನ್ಬು ಕರೆಸಿಕೊಂಡ ಕೆಲವು ಪ್ರಭಾವಿ ಸಚಿವರು ಬೆದರಿಕೆ ಹಾಕುತ್ತಿರುವ ಬಗ್ಗೆ ಕೇಳಿದಾಗ, ಅಂತಹ ಯಾವುದೇ ಪ್ರಸಂಗ ನಡೆದಿಲ್ಲ ಎಂದರು.

ವರ್ಗಾವಣೆಯಲ್ಲಿ ಭೀಮಾ ನಾಯ್ಕ್ ಹಸ್ತಕ್ಷೇಪದ ಬಗ್ಗೆ ಕೇಳಿದಾಗ, ಎಲ್ಲಾ ಪಕ್ಷಗಳಲ್ಲಿ ಇಂತದ್ದು ಇದ್ದೇ ಇದೆ, ಅದರಲ್ಲಿ ವಿಶೇಷವೇನಿಲ್ಲ, ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT