ಭೀಮಾ ನದಿ ಪಾತ್ರದ ಉಜನಿ ಮತ್ತು ವೀರ ಭಟಕರ ಜಲಾಶಯ ಭರ್ತಿಯಾಗಿದ್ದು, ಈ ಎರಡೂ ಜಲಾಶಯಗಳಿಗೆ ಒಳಹರಿದು ಬರುವ ಎಲ್ಲಾ ನೀರನ್ನು ಭೀಮಾ ನದಿ ಪಾತ್ರಕ್ಕೆ ನೇರವಾಗಿ ಬಿಡಲಾಗುವುದು. ಸೋಮವಾರದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಅವರು ತಿಳಿಸಿದ್ದಾರೆ.