ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 34 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

Last Updated 10 ಆಗಸ್ಟ್ 2021, 15:32 IST
ಅಕ್ಷರ ಗಾತ್ರ

ವಿಜಯಪುರ: ಮಧ್ಯಪ್ರದೇಶ ರಾಜ್ಯಕ್ಕೆ ಸೇರಿದ ಲಾರಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹34.02 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ಮಂಗಳವಾರ ಪತ್ತೆ ಮಾಡಿದ್ದಾರೆ.

ನಗರದ ವಾಣಿಜ್ಯ ತೆರಿಗೆ ಇಲಾಖೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಮಧ್ಯಪ್ರದೇಶದ (ಎಂಪಿ 09 ಜಿಎಚ್‌4917) ಐಷರ್‌ ಲಾರಿಯೊಂದರಲ್ಲಿ ಬೃಹತ್‌ ಪ್ರಮಾಣದ ಗೋವಾ ಮದ್ಯ ಇರುವುದನ್ನು ಪತ್ತೆಹಚ್ಚಿ, ವಶಪಡಿಸಿಕೊಳ್ಳಲಾಗಿದೆ.

ಜುಲೈ 17ರಂದು ನಗರದ ಐಒಸಿ ಡಿಪೋ ಸಮೀಪದ ಮೇಲ್ಸೇತುವೆ ಬಳಿ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಈ ಲಾರಿಯನ್ನು ತಪಾಸಣೆ ಮಾಡಿದಾಗ ವಾಹನದ ಚಾಲಕ ತೋರಿಸಿದ ಇ–ವೇ ಬಿಲ್‌ ತಾಳೆಯಾಗದೇ ಇದ್ದ ಕಾರಣ ವಾಹನವನ್ನು ವಶಕ್ಕೆ ಪಡೆದ ಸಿಬ್ಬಂದಿ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ತಂದು ನಿಲ್ಲಿಸಿದ್ದರು. ಬಳಿಕ ವಾಹನದ ಚಾಲಕ ನೆಪ ಹೇಳಿಕೊಂಡು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ಈ ವಾಹನದಲ್ಲಿ ಗೋವಾ ಮದ್ಯ ಇರುವ ಬಗ್ಗೆ ಅಬಕಾರಿ ಇಲಾಖೆ ಸಿಬ್ಬಂದಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಇರುವುದು ಖಚಿತವಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ವಾಹನದ ಅಂದಾಜು ಮೊತ್ತ ₹ 17.60 ಲಕ್ಷ ಹಾಗೂ ಗೋವಾ ಮದ್ಯದದ ಮೊತ್ತ ₹34.02 ಲಕ್ಷ ಸೇರಿದಂತೆ ಒಟ್ಟು ₹51.62 ಲಕ್ಷ ಮೌಲ್ಯವಾಗಿದೆ ಎಂದು ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಉಪ ಅಧೀಕ್ಷಕ ಎಚ್‌.ಎಸ್‌.ವಜ್ರಮಟ್ಟಿ, ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ, ಅಬಕಾರಿ ಹಿರಿಯ ಕಾನ್‌ಸ್ಟೆಬಲ್‌ ಆರ್‌.ಎಸ್‌.ಮಾನೆ, ಬಿ.ಎಸ್‌.ತಡಕಲ್‌, ಎ.ಜಿ.ಹಳ್ಳದ, ಅರ್ಜುನ ಗೊಟಗುಣಕಿ, ಎಂ.ಜಿ.ಶಿರಗೊಂಡ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT