ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಜಯಪುರ | 6ನೇ ಶ್ವಾನ ಪ್ರದರ್ಶನ: ಶ್ವಾನಗಳ ಗತ್ತು, ಗಮ್ಮತ್ತು ಪ್ರದರ್ಶನ

ಆನಂದ ರಾಠೋಡ
Published : 18 ಡಿಸೆಂಬರ್ 2023, 7:41 IST
Last Updated : 18 ಡಿಸೆಂಬರ್ 2023, 7:41 IST
ಫಾಲೋ ಮಾಡಿ
Comments
ವಿಜಯಪುರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನದಲ್ಲಿ ಯುವತಿಯ ಸನ್ನೆಗೆ ಪ್ರತಿಕ್ರಿಯಿಸಿದ ಶ್ವಾನ  
–ಚಿತ್ರ ರಾಜು ಢವಳಗಿ
ವಿಜಯಪುರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನದಲ್ಲಿ ಯುವತಿಯ ಸನ್ನೆಗೆ ಪ್ರತಿಕ್ರಿಯಿಸಿದ ಶ್ವಾನ   –ಚಿತ್ರ ರಾಜು ಢವಳಗಿ
ವಿಜಯಪುರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನಕ್ಕೂ ಮೊದಲು ಮಾಲಿಕನೊಂದಿಗೆ ಆಟವಾಡಿದ ಶ್ವಾನ
–ಚಿತ್ರ ರಾಜು ಢವಳಗಿ
ವಿಜಯಪುರ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನಕ್ಕೂ ಮೊದಲು ಮಾಲಿಕನೊಂದಿಗೆ ಆಟವಾಡಿದ ಶ್ವಾನ –ಚಿತ್ರ ರಾಜು ಢವಳಗಿ
ಇದೇ ಮೊದಲ ಬಾರಿಗೆ ಸೆಂಟ್ ಬರ್ನಾಲ್ಡ್ ಶ್ವಾನವನ್ನು ಪ್ರದರ್ಶನಕ್ಕೆ ತಂದಿದ್ದೇನೆ. ವಿಜಯಪುರದಲ್ಲಿಇವು ಸಿಗುವುದಿಲ್ಲ. ನಾನು 15 ತಿಂಗಳ ಹಿಂದೆ ಕೇರಳದಿಂದ ತಂದಿದ್ದೇನೆ. ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ
ಇಸ್ಮಾಯಿಲ್ ಜಂಬಗಿ ವಿಜಯಪುರ
ವಿಜಯಪುರದಲ್ಲಿ ನಡೆಯುತ್ತಿರುವ ಶ್ವಾನ ಪ್ರದರ್ಶನದಲ್ಲಿಎರಡನೇ ಬಾರಿ ಭಾಗವಹಿಸಿದ್ದೇನೆ. ಜಿಲ್ಲೆಯಲ್ಲಿ ಈ ರೀತಿ ಶ್ವಾನ ಪ್ರದರ್ಶನ ಆಯೋಜಿಸುತ್ತಿರುವದು ಸಂತಸ ಮೂಡಿಸಿದೆ. ಶ್ವಾನ ಪ್ರಿಯರಿಗೆ ಪ್ರೇರಣಾದಾಯಕವಾಗಿದೆ
–ಮಯೂರ ಪಟೇಲ್ ವಿಜಯಪುರ
ಆಕರ್ಷಕ ಬಹುಮಾನ:
ವಿಜಯಪುರ ನಗರದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಆಗಮಿಸಿದ್ದ ಎಲ್ಲ ಶ್ವಾನಗಳಲ್ಲಿ ಓವರ್‌ಆಲ್‌ ಚಾಂಪಿಯನ್‌ ಸ್ಥಾನಕ್ಕೆ ₹15 ಸಾವಿರ ನಗದು ಮತ್ತು ಟ್ರೋಫಿ ನಂತರ ಮೊದಲ ಬಹುಮಾನ ₹10 ಸಾವಿರ ನಗದು ಟ್ರೋಫಿ 2ನೇ ಬಹುಮಾನವಾಗಿ ₹7 ಸಾವಿರ ಮತ್ತು ಟ್ರೋಫಿ ಮೂರನೇ ಸ್ಥಾನಕ್ಕೆ ₹5 ಸಾವಿರ ನಗದು ಹಾಗೂ ಟ್ರೋಫಿ ಬಹುಮಾನಗಳನ್ನು ನೀಡಲಾಯಿತು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ಲೋಕಾಪುರದ ವೆಂಕಪ್ಪ ನಾವಲಗಿ ಅವರ ಮುಧೋಳ ಹೌಂಡ್‌ ಓವರ್‌ಆಲ್‌ ಚಾಂಪಿಯನ್‌ ಬಹುಮಾನ ಪಡೆಯಿತು. ಪ್ರಶಾಂತ ಅವಟಿ ಅವರ ಸಿಡ್ಜು ತಳಿ ಪ್ರಥಮ ಫಿರೋಜ್‌ ಮುಲ್ಲಾ ಅವರ ಜರ್ಮನ್‌ ಶೆಫರ್ಡ್‌ ದ್ವಿತೀಯ ಅನುಪ್‌ ಅವರ ಚೌಚೌ ತಳಿ ತೃತೀಯ ಬಹುಮಾನ ಪಡೆದವು.
ಪ್ರದರ್ಶನದಲ್ಲಿ ಜಾಗೃತಿ:
ಜಿಲ್ಲೆಯ ಜನರಲ್ಲಿ ತಿಳುವಳಿಕೆ ನೀಡುವುದರ ಜೊತೆಗೆ ಶ್ವಾನ ಪ್ರಿಯರಿಗೆ ಯುವಕರು ಸ್ವಯಂ ಉದ್ಯೋಗ ಮಾಡಲು ಈ ಶ್ವಾನ ಪ್ರದರ್ಶನ ಪ್ರೇರಣೆಯಾಯಿತು. ನಗರದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ರೇಬಿಸ್‌ ವ್ಯಾಕ್ಸಿನ್‌ ಹಾಕಲಾಯಿತು. ಉಚಿತವಾಗಿ ಆಹಾರಗಳನ್ನು ನೀಡಲಾಯಿತು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಹುಚ್ಚುನಾಯಿಗಳಿಂದ ಹರಡುವ ರೆಬಿಸ್‌ ರೋಗದ ಕುರಿತು ಜಾಗೃತಿಯನ್ನೂ ಮೂಡಿಲಾಯಿತು ಎನ್ನುತ್ತಾರೆ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಬಿ.ಎಸ್ ಕನಮಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT