ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು; ‘ಗೊಂಬೆ ಮಾಸ್ತರ್’ ಸಿದ್ದು ಬಿರಾದಾರ

Last Updated 1 ಜನವರಿ 2022, 11:28 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳಿಗೆ ಗೊಂಬೆಗಳೆಂದರೆ ಅಚ್ಚುಮೆಚ್ಚು, ಅವರು ಗೊಂಬೆಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆ ಮೂಲಕ ಪಾಠ ಬೋಧನೆ ಮಾಡುವುದರಿಂದ ಪರಿಣಾಮಕಾರಿ ಕಲಿಕೆ ಆಗುತ್ತದೆ. ಮಕ್ಕಳಿಗೆ ಗೊಂಬೆಯಾಟದ ಮೂಲಕ ಕ್ಲಿಷ್ಟಕರ ಪಾಠ ಬೋಧನೆ ಮಾಡುವಲ್ಲಿ ಯಶಸ್ಸನ್ನು ಕಂಡು, ತಮ್ಮ ವಿಜ್ಞಾನ ಪಾಠ ಬೋಧನೆಯಲ್ಲಿ ಗೊಂಬೆಗಳ ಬಳಕೆ ಮಾಡುತ್ತಾ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರಿಚಯ ಮಾಡುವುದರೊಂದಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಸಂತಸದಾಯಕ ಕಲಿಕೆಗೆ ಕಾರಣರಾದವರು ವಿಜ್ಞಾನ ಶಿಕ್ಷಕ ಸಿದ್ದು ಬಿರಾದಾರ.

ಅಷ್ಟೆ ಅಲ್ಲದೆ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಜೊತೆಗೆ ರಾಮಾಯಣ, ಮಹಾಭಾರತ ಸೇರಿದಂತೆ ನಾನಾ ಕಥೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ವಿಭಿನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಬಿರಾದಾರ. ನಿಡಗುಂದಿ ತಾಲ್ಲೂಕಿನ ಮುದ್ದಾಪುರದ ಸಿದ್ದು ಬಿರಾದಾರ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

260ಕ್ಕೂ ಹೆಚ್ಚೂ ಗೊಂಬೆಗಳನ್ನು ಬಳಸಿ ವಿಜ್ಞಾನ ಪಾಠ ಬೋಧನೆ ಮಾಡುತ್ತಾರೆ. ಮಕ್ಕಳಿಂದಲೇ ಗೊಂಬೆಯಾಟ ಮಾಡಿಸುತ್ತಾರೆ. ಬೆರಳುಗೊಂಬೆ, ಕೈಗೌಸುಗೊಂಬೆ, ಸೂತ್ರದಗೊಂಬೆ, ಕಡ್ಡಿ ಗೊಂಬೆ, ನೆರಳು ಬೆಳಕಿನ ಗೊಂಬೆ, ಮುಖವಾಡ ಗೊಂಬೆ, ಹೀಗೆ 360ಕ್ಕೂ ಹೆಚ್ಚು ಗೊಂಬೆ ಗಳನ್ನು ಪಾಠ ಬೋಧನೆಯಲ್ಲಿ ಬಳಸುತ್ತಾರೆ. ರಾಜ್ಯ, ಹೊರ ರಾಜ್ಯದ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT