ಗುರುವಾರ , ಸೆಪ್ಟೆಂಬರ್ 23, 2021
22 °C
ಲಯನ್ಸ್ ಕ್ಲಬ್ ಬಿಜಾಪುರದ ನೂತನ ಪದಾಧಿಕಾರಿಗಳ ಪದಗ್ರಹಣ

ಆತ್ಮತೃಪ್ತಿಗಾಗಿ ಸೇವೆ ಮಾಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಲಯನ್ಸ್ ಕ್ಲಬ್ ಬಿಜಾಪುರ ಪರಿವಾರದ ನೂತನ ಅಧ್ಯಕ್ಷರಾಗಿ ತುಳಿಸಿಗಿರೀಶ ಹೃದ್ರೋಗ ಮತ್ತು ಮಧುಮೇಹ ಆಸ್ಪತ್ರೆಯ ಮುಖ್ಯಸ್ಥ ಡಾ.ಬಾಬು ರಾಜೇಂದ್ರ ನಾಯಕ್ ಪದಗ್ರಹಣ ಮಾಡಿದರು.

ಕಾರ್ಯದರ್ಶಿಯಾಗಿ ಶ್ರವಣಕುಮಾರ ಮಹೇಂದ್ರಕರ, ಖಜಾಂಚಿಯಾಗಿ ಮೋಹನ್ ಚವ್ಹಾಣ ಪದಗ್ರಹಣ ಮಾಡಿದರು. ಜಿಲ್ಲಾ ಗವರ್ನರ್ ಸುಗಳಾ ಯಳಮೇಲಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ್ ಕವಟಗಿ ಮಾತನಾಡಿ, ಆತ್ಮತೃಪ್ತಿಗಾಗಿ ಸೇವೆಯನ್ನು ಮಾಡಬೇಕೇ ಹೊರತು ಯಾವುದೇ ದುರಾಲೋಚನೆ ಇಟ್ಟುಕೊಂಡು ಸಮಾಜ ಸೇವೆ ಮಾಡಬಾರದು ಎಂದು  ಹೇಳಿದರು.

ಶಿವಶರಣ ಪಾಟೀಲ, ಡಾ. ಗಿರೀಶ್ ಕುಲ್ಲೋಳ್ಳಿ, ಡಾ.ರವಿ ಬಿರಾದಾರ, ಡಾ.ರವಿ ನಾಯಿಕ, ಡಾ.ನಚಿಕೇತ ದೇಸಾಯಿ, ರಾಜಶೇಖರ ಮುತ್ತಿನಪೆಂಡಿಮಠ, ರಜನಿ ಸಂಬಣ್ಣಿ, ಕವಿತಾ ಜಹಗೀರದಾರ, ಮೊಹಿನ್‌ ಕಲಾದಗಿ, ಚಂದ್ರಶೇಖರ ಜಾಧವ, ಸುನೀಲ್ ನಾಯಿಕ, ವಿದ್ಯಾರಾಣಿ, ದೊಡಮನಿ, ತುಂಗಳ, ಜುಗತಿ ನೂತನವಾಗಿ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಸದಸ್ಯರಾಗಿ ಪದಗ್ರಹಣ ಮಾಡಿದರು.

ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಜೋಗುರ, ಡಾ.ಮಿಸ್ತ್ರಿ ಮಲ್ಲಿಕಾರ್ಜುನ, ಡಾ.ಅಶೋಕ ಜಾಧವ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಮಲ್ಲು ಕಲಾದಗಿ, ಸಿಂದಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಪೊರವಾಲ, ಜೆಸಿ ಕ್ಲಬ್ ಅಧ್ಯಕ್ಷ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.