‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿತರಣೆಯಾಗಬೇಕಿದ್ದ ಆಹಾರ ಇತರೇ ಸಾಮಗ್ರಿಗಳನ್ನು ಕಾರ್ಯಕರ್ತೆ ವಿತರಿಸುತ್ತಿಲ್ಲ, ಕೆಲಸ ನಿರ್ವಹಿಸುವ ಸಹಾಯಕಿಯೂ ಸಹ ಮಕ್ಕಳಿಗೆ ಗುಣಮಟ್ಟದ ಊಟ ಬಡಿಸುತ್ತಿಲ್ಲ, ಸರ್ಕಾರ ವಿತರಣೆ ಮಾಡಿದ ರವೆ, ಬೆಲ್ಲ ಮೊಟ್ಟೆ ಸೇರಿದಂತೆ ಕೇಂದ್ರದ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅಲ್ಲದೇ ಆಹಾರ ವಿತರಣೆಯ ಅವಧಿಯೂ ಮುಗಿದ ಪರಿಣಾಮ ಚೀಲಗಳಲ್ಲೇ ನುಸಿ ಹುಳು ಉತ್ಪತ್ತಿಗೊಂಡಿವೆ, ಸರ್ಕಾರದ ನಿಯಮದಂತೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡದೇ ಮಾರಿಕೊಳ್ಳುತ್ತಿದ್ದಾರೆ’ ಎಂದು ಆ 10 ರಂದು ಆಕ್ರೋಶ ವ್ಯಕ್ತಪಡಿಸಿದ ಡಿಎಸ್‌ಎಸ್ ಮುಖಂಡ ರಾಜು ಮಸಬಿನಾಳ ಹಾಗೂ ಹುಸೆನ್ ಅವಟಿ ಸೇರಿದಂತೆ ಮಹಿಳಾ ಫಲಾನುಭವಿಗಳು ಕೊಳೆತ ಆಹಾರವನ್ನು ಕೇಂದ್ರದಲ್ಲೇ ಬೀಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.