ಭಾನುವಾರ, ಸೆಪ್ಟೆಂಬರ್ 27, 2020
27 °C

ವಿಜಯಪುರ | ಮೂವರು ದರೋಡೆಕೊರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬೈಕಿನಲ್ಲಿ ಹೋಗುತ್ತಿದ್ದವರನ್ನು ಕಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಅವರ ಬಳಿ ಇದ್ದ ಹಣ, ಮೊಬೈಲ್‌ ಫೋನ್‌ ಕಿತ್ತುಕೊಂಡು ಪರಾರಿಯಾಗಿದ್ದ ಆಲಮೇಲದ ಮೂವರು ದರೋಡೆಕೋರನ್ನು ಪೊಲೀಸರು ಬಂಧಿಸಿದ್ದಾರೆ.

ಆಲಮೇಲದ ರಫೀಕ್‌ ಮನಗೂಳಿ(20), ರಾಜಾ ಸೌದಾಗರ(19), ಮಹಿಬೂಬ ಸೌದಾಗರ(20) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ₹ 25 ಸಾವಿರ ನಗದು ಮತ್ತು ಎರಡು ಮೊಬೈಲ್‍ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್, ಒಂದು ಖಾರದಪುಡಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಕಕ್ಕಳಮೇಲಿ ನಿವಾಸಿ ಸಿದ್ಧಪ್ಪ ಬಳಬಟ್ಟಿ ಆಗಸ್ಟ್‌ 7ರಂದು ರಾತ್ರಿ 10.45ಕ್ಕೆ ವಿಭೂತಿಹಳ್ಳಿ ಕಡೆಯಿಂದ ತೋಂಟಾಪುರಕ್ಕೆ ಬೈಕ್‌ನಲ್ಲಿ ಹೊರಟಿದ್ದಾಗ, ಮೂರು ಬೈಕುಗಳಲ್ಲಿ ಹಿಂಬಾಲಿಸಿದ ದರೋಡೆಕೋರರು, ಬೈಕ್‌ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಬಳಿ ಇದ್ದ ₹ 25 ಸಾವಿರ ನಗದು, ಮೊಬೈಲ್ ಫೋನ್‌ ಕಸಿದಿಕೊಂಡು ಪರಾರಿಯಾಗಿದ್ದರು.

ಅದೇ ರೀತಿ ರಾಮನಹಳ್ಳಿಯ ರಮೇಶ ಹಳೆಮನಿ ಅವರು ಬೈಕ್‌ನಲ್ಲಿ ತಮ್ಮೂರಿಗೆ ಹೋಗುವಾಗ ಅಡ್ಡಗಟ್ಟಿದ ದರೋಡೆಕೋರರು, ಅವರ ಕಣ್ಣಿಗೂ ಖಾರದ ಪುಡಿ ಎರಚಿ ಅವರ ಬಳಿ ಇದ್ದ ₹7 ಸಾವಿರ ನಗದು ಮತ್ತು ಮೊಬೈಲ್‌ ಫೋನ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಇಂಡಿ ಉಪವಿಭಾಗದ ಡಿಎಸ್‌ಪಿ ಟಿ.ಎಸ್‌.ಸುಲ್ಪಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆ ರಚನೆ ಮಾಡಲಾಗಿದ್ದ ತನಿಖಾ ತಂಡವು ಗುರುವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಸಿಪಿಐ ಸತೀಶಕುಮಾರ ಎಸ್.ಕಾಂಬಳೆ, ಆಲಮೇಲ ಪಿಎಸ್‍ಐ ನಿಂಗಪ್ಪ ಎಚ್.ಪೂಜೇರಿ, ಸಿಬ್ಬಂದಿಗಳಾದ ಎಲ್.ಯು.ನಧಾಪ, ಎಂ.ಜಿ.ಪಾಟೀಲ, ಎನ್.ಆರ್.ಚೌಧರಿ, ಎಸ್.ಎಲ್.ತೆನ್ನಿಹಳ್ಳಿ, ರಾಜು ರಾಠೋಡ, ಎಸ್.ಕೆ.ಕಲ್ಲೂರ, ಎಂ.ಎಸ್.ಗೊರನಾಳ, ಎಸ್.ಎಚ್.ಇಂಡಿ, ಎಸ್.ಬಿ.ದಿಂಡವಾರ, ಪ್ರಕಾಶ ಮೈದರಗಿ, ಎಸ್.ಎಸ್.ಬಾಪಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು