ಗುರುವಾರ , ಜೂನ್ 24, 2021
29 °C

ವಿಜಯಪುರ: ಬಾಲಪರಾಧಿ ಸೇರಿದಂತೆ ಮೂವರು ಮನೆಗಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ವಿವಿಧೆಡೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿದಂತೆ ಮೂವರನ್ನು ಜಲನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗಣೇಶನಗರದ ಗೋಬಿ ಮಂಚೂರಿ ವ್ಯಾಪಾರಿ ಕಿರಣ ಶರ್ಮಾ(19), ರೈಲು ನಿಲ್ದಾಣದ ಹತ್ತಿರದ ಆಟೊರಿಕ್ಷಾ ಚಾಲಕ ವಿರೇಶ ಬಂಥನಾಳ(19) ಮತ್ತು ಬಾಲಪರಾಧಿ ಬಂಧಿತರಾಗಿದ್ದಾರೆ.

ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 190 ಗ್ರಾಂ ಬಂಗಾರದ ಆಭರಣ, 145 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಾಗೂ ಒಂದು ಲ್ಯಾಪ್‌ಟಾಪ್‌, ಕ್ಯಾಮೆರಾ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ ಸೇರಿದಂತೆ ಒಟ್ಟು ₹ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಗೋಳಗುಮ್ಮಟ ಸಿಪಿಐ ಬಿ.ಕೆ.ಮೂಕರ್ತಿಹಾಳ, ಜಲನಗರ ಪಿಎಸ್‌ಐ ಬಿ.ಎನ್‌.ಝೀಂಗಾಡೆ, ಸಿಬ್ಬಂದಿಗಳಾದ ಬಿ.ಎಂ.ಪವಾರ, ಬಿ.ಟಿ.ಹೊಸಮನಿ, ಎಸ್.‌ಎಚ್‌.ನಾಯಕ, ಪಿ.ಎಸ್‌.ಬಿರಾದಾರ, ಎಲ್‌.ಎಂ.ಬಿರಾದಾರ, ಎಸ್‌.ಎಂ.ನಂದೇಶ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು